ಸಾಲ ಕೊಟ್ಟ ಮಹಿಳೆಗೆ ಕಾರಿನಲ್ಲಿ ಹೀಗಾ ಮಾಡೋದು?

ಮಂಗಳವಾರ, 22 ಸೆಪ್ಟಂಬರ್ 2020 (22:59 IST)
ಆಪತ್ ಕಾಲದಲ್ಲಿದ್ದಾಗ ಸಾಲ ಕೊಟ್ಟಿದ್ದ ಮಹಿಳೆಯೊಬ್ಬಳಿಗೆ ಆಗಬಾರದ್ದು ಆಗಿಹೋಗಿದೆ.

ಕಾರು ಚಾಲಕನಾಗಿರುವ ಸುರೇಶ್ ಎಂಬಾತ ಜಯಮ್ಮ ಎಂಬುವರ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದನು.

ಹಲವು ಸಲ ಸಾಲ ಪಡೆದುಕೊಂಡು ಕೊಡುತ್ತಾ ಜಯಮ್ಮಳ ಜೊತೆ ಸಲುಗೆ ಬೆಳೆಸಿಕೊಂಡಿದ್ದನು.
ಜಯಮ್ಮನ ಮಗನಿಗೆ ಹೆಣ್ಣು ತೋರಿಸುತ್ತೇನೆ ಎಂದು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದನು ಎನ್ನಲಾಗಿದೆ.

ಮಂಡ್ಯದ ಮಳವಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಚಾಲಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ