ಮನೆ ಹೊರಗೆ ಮಲಗಿದ್ದ ಪತ್ನಿಗೆ ಆತ ಮದ್ಯರಾತ್ರಿ ಮಾಡಿದ್ದೇನು? ಶಾಕಿಂಗ್
ಮನೆ ಹೊರಭಾಗದಲ್ಲಿ ಮಲಗಿದ್ದ ಪತ್ನಿಯ ಮೇಲೆ ಆತ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬೇವಿನಹಳ್ಳಿ ಗ್ರಾಮದಲ್ಲಿ ಪತ್ನಿ ಹತ್ಯೆಗೈದು ಪತಿ ಪರಾರಿಯಾಗಿದ್ದಾನೆ. ವೇಲ್ ನಿಂದ ಉಸಿರುಗಟ್ಟಿಸಿ ಶುಭಾ(27) ಹತ್ಯೆ ಮಾಡಿದ್ದಾನೆ. ಹೀಗಂತ ಪತಿ ಕರಿಯಪ್ಪ ವಿರುದ್ಧ ಶುಭಾ ಸಂಬಂಧಿಕರ ಆರೋಪವಾಗಿದೆ.
ಮನೆ ಹೊರಭಾಗದಲ್ಲಿ ಮಲಗಿದ್ದಾಗ ಕೃತ್ಯ ನಡೆದಿದೆ. ಘಟನೆ ಬಳಿಕ ಪತಿ ಕರಿಯಪ್ಪ ನಾಪತ್ತೆಯಾಗಿದ್ದಾನೆ.
ಈ ವರೆಗೆ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.