ಸಚಿವ ಸಂಪುಟ ವಿಸ್ತರಣೆ ಮುಂದೂಡುತ್ತಿರುವುದರ ಬಗ್ಗೆ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?
‘ಕೆಪಿಸಿಸಿ ಅಧ್ಯಕ್ಷ ಮತ್ತು ಡಾ. ಪರಮೇಶ್ವರ್ ಸೇರಿದಂತೆ ಮುಖಂಡರಿಗೆ ತಿಳಿಸಿದ್ದೇನೆ. ತಡವಾದಷ್ಟು ಅಸಮಾಧನ ಹೆಚ್ಚಾಗುತ್ತೆ. ರಾಜ್ಯ ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು. ಸಿಕ್ಕಲ್ಲಿ ತೂರಿಕೊಳ್ಳೋ ಜನರಿದ್ದಾರೆ. ಸದ್ಯ ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಎಲ್ಲೂ ಹೋಗಿಲ್ಲ. ಈಗ ಹಾವೇರಿಯಲ್ಲಿದ್ದೇನೆ. ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು’ ಎಂದು ಅಸಮಾಧಾನ ಹೊರಹಾಕಿದ್ದಾರೆ.