ಅಮೇರಿಕ ಅಧ್ಯಕ್ಷರ ಭೇಟಿ ವಿಚಾರದ ಬಗ್ಗೆ ಸಿಎಂ ಹೇಳಿದ್ದೇನು?
ಸೋಮವಾರ, 24 ಫೆಬ್ರವರಿ 2020 (11:03 IST)
ಶಿವಮೊಗ್ಗ : ಭಾರತಕ್ಕೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನಲೆ ಟ್ರಂಪ್ ಗೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟಕ್ಕೆ ಸಿಎಂ ಬಿಎಸ್ ವೈಗೆ ಆಹ್ವಾನ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಔತಣಕೂಟಕ್ಕೆ ನನಗೂ ಆಹ್ವಾನ ಬಂದಿದೆ. ಆದ್ರೆ ನಾಳೆಯೂ ಹಲವು ಕಾರ್ಯಕ್ರಮಗಳು ಇರುವ ಹಿನ್ನಲೆ ಔತಣಕೂಟದಲ್ಲಿ ಭಾಗಿಯಾಗುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ.
ಹಾಗೇ ಅಮೇರಿಕ ಅಧ್ಯಕ್ಷರ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಅಮೇರಿಕ ಅಧ್ಯಕ್ಷರ ಭೇಟಿ ಸಾಮಾನ್ಯವಾದ ವಿಷಯವಲ್ಲ. ಇದರಿಂದ ದೇಶಕ್ಕೆ ಸಾಕಷ್ಟು ಅನುಕೂಲವಿದೆ ಎಂದು ಅವರು ತಿಳಿಸಿದ್ದಾರೆ.