ಪ್ರವಾಹಕ್ಕೆ ಸಿಲುಕಿರೋ ಹಾವು ಮಾಡಿದ್ದೇನು?

ಭಾನುವಾರ, 11 ಆಗಸ್ಟ್ 2019 (17:23 IST)
ಧಾರಾಕಾರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಜನರಿಗೆ ಮಾತ್ರವಲ್ಲ ಜಲಚರಗಳಿಗೂ ಅಪಾಯ ತಂದಿಟ್ಟಿವೆ.
ಹಾವಿಗೂ ಕೂಡ ಪ್ರಾಣ ಭಯದ ವಾತಾವರಣ ಉಂಟಾಗಿರೋ ಚಿತ್ರಣ ಕಂಡು ಬಂದಿದೆ.

ಮಂಡ್ಯದ ಹೇಮಗಿರಿ ಹೇಮಾವತಿಯ ಪ್ರವಾಹದಲ್ಲಿ ಕೊಚ್ಚಿಹೋಗುವ ಭಯದಿಂದ ನದಿಯ ಅರಿವಿನ ದಡದಲ್ಲಿ ಸಿಲುಕಿರುವ ಹಾವಿನ ಮರಿಯೊಂದು ಭಯದಲ್ಲಿದ್ದ ಚಿತ್ರಣ ಲಭ್ಯವಾಗಿದೆ. ನೀರಿನ ಸೆಳೆತದಿಂದ ತಪ್ಪಿಸಿಕೊಳ್ಳಲು ಗಿಡದ ಬಳ್ಳಿಯನ್ನು ಸುತ್ತಿಕೊಂಡಿತ್ತು.

ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಸಂಗತಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ನೆರೆ ಪರಿಸ್ಥಿತಿಗೆ ಜನ-ಜಾನುವಾರುಗಳು ಮಾತ್ರವಲ್ಲ, ಜಲಚರಗಳೂ ತೊಂದರೆಗೆ ಒಳಗಾಗಿವೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ