ಲಸಿಕೆ ಹಾಕಿಸಲು ಏನೆಲ್ಲ ಬೇಕು?

ಸೋಮವಾರ, 3 ಜನವರಿ 2022 (08:56 IST)
ಬೆಂಗಳೂರು : ಇಂದಿನಿಂದ ದೇಶಾದ್ಯಂತ ಮಕ್ಕಳಿಗೆ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ.
 
ಮೊದಲ ಹಂತದಲ್ಲಿ ಇಂದಿನಿಂದ 15 ರಿಂದ 18 ವರ್ಷದವರಿಗೆ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ.

ಅಭಿಯಾನಕ್ಕೆ ಬೆಂಗಳೂರಿನ ಶಾಲೆ, ಕಾಲೇಜುಗಳು ಸಜ್ಜಾಗಿವೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯಿಂದ ಸಿಕ್ಕ ಮಾರ್ಗಸೂಚಿಯಂತೆ ಲಸಿಕಾ ಕೇಂದ್ರಗಳು ಸಿದ್ಧತೆ ಮಾಡಿಕೊಂಡಿವೆ.

ಮೂಡಲಪಾಳ್ಯದ ಭೈರವೇಶ್ವರಿನಗರದ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ 9:30ಕ್ಕೆ ಸಿಎಂ ಬೊಮ್ಮಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ 15 ರಿಂದ 18 ವರ್ಷೊದಳಗಿನ ಒಟ್ಟು 7 ಲಕ್ಷ ಮಕ್ಕಳಿದ್ದಾರೆ. ಇವ್ರೆಲ್ಲರಿಗೂ ವ್ಯಾಕ್ಸಿನ್ ನೀಡಲು ಬಿಬಿಎಂಪಿ ಸಜ್ಜಾಗಿದೆ.

ದಿನಕ್ಕೆ 50 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಪ್ರತಿ ದಿನ ಒಂದು ಶಾಲೆ ಆಯ್ಕೆ ಮಾಡಿ ಲಸಿಕೆ ನೀಡಲು ಪ್ಲ್ಯಾನ್ ಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿದೆ. ಒಂದ್ವೇಳೆ ವಿದ್ಯಾರ್ಥಿಗೆ ಕೈ ನೋವು, ಸುಸ್ತು ಜ್ವರ ಕಾಣಿಸಿಕೊಂಡ್ರೆ ರಜೆ ನೀಡುವಂತೆ ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ