ಸಂವಿಧಾನ ಬಗ್ಗೆ ಬಿಜೆಪಿ ಶಾಸಕ ಹೇಳಿದ್ದೇನು?

ಶುಕ್ರವಾರ, 12 ಏಪ್ರಿಲ್ 2019 (20:46 IST)
ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಬಿಜೆಪಿಯಲ್ಲಿದ್ದು, ನಂತರ  ಕಾಂಗ್ರೆಸ್ ಹೋದ ಅವಕಾಶವಾದಿ ರಾಜಕಾರಣಿ. ಹೀಗಂತ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.

ವಿ.ಶ್ರೀನಿವಾಸಪ್ರಸಾದ್ ಅವರನ್ನು ಅವಕಾಶವಾದಿ ರಾಜಕಾರಣಿ ಎನ್ನುವ ಸಂಸದ ಧ್ರುವನಾರಾಯಣ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಗೆ ಹೋದವರು ಎಂದರು.

ಗುಂಡ್ಲುಪೇಟೆ ನ್ಯಾಯಾಲಯದ ಆವರಣದಲ್ಲಿ ವಕೀಲರ ಬಳಿ ಮತಯಾಚಿಸಿ, ಸುದ್ದಿಗಾರರೊಂದಿಗೆ ಸುರೇಶ್ ಕುಮಾರ್ ಮಾತನಾಡಿದರು.

ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಗೆ ಹೋದವರು, ಬೇರೆಯವರ ವಿರುದ್ಧ ಆರೋಪ ಮಾಡುವ ಮೊದಲು ಯೋಚಿಸಬೇಕು ಎಂದು ಜರಿದರು.

ದೇಶಕ್ಕೆ ಒಬ್ಬ ನಿರ್ಣಾಯಕ ವ್ಯಕ್ತಿ ಬೇಕು, ಅದಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು‌ ಎಂದರು.  ಐಟಿ ರೈಡ್ ಮಾಡುತ್ತಿರುವುದು ಇಲಾಖೆಯಷ್ಟೆ ಹೊರತು ಮೋದಿಯವರಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂವಿಧಾನ ನಿರ್ಮಾಣ ಮಾಡಿದವರು ಮಾಹಾನ್ ಮೇಧಾವಿಗಳು, ಅದನ್ನು ಬದಲಾಯಿಸಲು ಸಾದ್ಯವಿಲ್ಲ, ಸಂವಿಧಾನ ಅನ್ನೋದು ಬದಲಾಯಿಸುವ ಗ್ರಂಥ ಅಲ್ಲ, ಅದು ಸ್ಟ್ರಾಂಗ್ ಡಾಕ್ಯುಮೆಂಟ್ ಅಂತ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ