ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೆ?- ಕುಮಾರಸ್ವಾಮಿ ಪ್ರಶ್ನೆ

ಭಾನುವಾರ, 5 ಏಪ್ರಿಲ್ 2020 (10:46 IST)
ಬೆಂಗಳೂರು : ಏಪ್ರಿಲ್ 5 ರಂದು ಇಡೀ ದೇಶದ ಜನತೆಗೆ ದೀಪ ಬೆಳಗಬೇಕು ಎಂದು ಪ್ರದಾನಿ ಮೋದಿ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ  ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 1980 ಏಪ್ರಿಲ್ 6 ಬಿಜೆಪಿ ಸಂಸ್ಥಾಪನಾ ದಿನ . 5 ಏಪ್ರಿಲ್ 2020ಕ್ಕೆ ಬಿಜೆಪಿಗೆ 40 ವರ್ಷ ತುಂಬುತ್ತದೆ. ಬಿಜೆಪಿ ಸಂಸ್ಥಾಪನಾ ದಿನ ಆಚರಿಸುವುದಕ್ಕೆ ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೆ? ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಸಂಕಷ್ಟ ದಿನಗಳಲ್ಲಿ ನೇರ ನೇರಾ ಆಚರಿಸಲು ಹಿಂಜರಿದು ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

 

ದೇಶದ ಸಂಕಟ ಬಗೆಹರಿಸುವ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏ.5ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ ಕಾರಣವಿದೆ ಸ್ಪಷ್ಟಪಡಿಸಲಿ. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇದೆ. ಈಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ರೀತಿ ತೋರಿಕೆಯ ಸಂಭ್ರಮ ಬೇಕೆ ಎಂದು ಟ್ವೀಟ್ ಮೂಲಕ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ