ವಾಟ್ ಇಸ್ ಫೇಸ್‌ಬುಕ್? ಎಂದು ಕೇಳಿದ ಡಿವೈಎಸ್‌ಪಿ ಅನುಪಮಾ ಶೆಣೈ

ಗುರುವಾರ, 9 ಜೂನ್ 2016 (11:34 IST)
ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಡಿವೈಎಸ್‌ಪಿ ಅನುಪಮಾ ಶೆಣೈ, ಇಂದು ಕೂಡ್ಲಗಿಗೆ ಮರಳಿದ್ದು, ವಾಟ್ ಇಸ್ ಫೇಸ್‌ಬುಕ್? ನನ್ನ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿರಬಹುದು ಎಂದು ಹೇಳಿದ್ದಾರೆ. 
 
ಕಳೆದ ಕೆಲ ದಿನಗಳಿಂದ ಶೆಣೈ ಫೇಸ್‌ಬುಕ್‌ನಲ್ಲಿ ಕಾರ್ಮಿಕ ಖಾತೆ ಸಚಿವ ಪರಮೇಶ್ವರ್ ನಾಯಕ್ ವಿರುದ್ಧ ಹಲವಾರು ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು.
 
ಕಳೆದ ಕೆಲ ದಿನಗಳಿಂದ ಮರೆಯಲ್ಲಿ ಉಳಿದಿದ್ದ ಶೆಣೈ ಅವರನ್ನು ಪತ್ತೆ ಮಾಡಲು ಬಳ್ಳಾರಿ ಎಸ್‌ಪಿ ಚೇತನ್ ವಿಶೇಷ ತಂಡ ರಚನೆ ಮಾಡಿದ್ದರು. ವಿಶೇಷ ತಂಡದ ಅಧಿಕಾರಿಗಳು ಆಕೆಯ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. 
 
ಇಂದು ಬಳ್ಳಾರಿಗೆ ಆಗಮಿಸಿದ ಶೆಣೈ, ನನ್ನ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲವಾದ್ದರಿಂದ ಮಾಧ್ಯಮಗಳೊಂದಿಗೆ ಮಾತನಾಡುವುದರಿಂದ ಮತ್ತಷ್ಟು ಸಮಸ್ಯೆಗಳು ಉಲ್ಭಣಿಸುತ್ತವೆ ಎಂದು ತಿಳಿಸಿದ್ದಾರೆ. 
 
ಫೇಸ್‌ಬುಕ್ ಖಾತೆಯ ಬಗ್ಗೆ ಸುದ್ದಿಗಾರರು ಶೆಣೈ ಅವರನ್ನು ಪ್ರಶ್ನಿಸಿದಾಗ, ವಾಟ್ ಈಸ್ ಫೇಸ್‌ಬುಕ್? ಫೇಸ್‌ಬುಕ್ ಅಂದ್ರೆ ನನಗೆ ಗೊತ್ತಿಲ್ಲ. ಯಾರಾದರೂ ನನ್ನ ಹೆಸರಿನ ಮೇಲೆ ಖಾತೆ ಓಪನ್ ಮಾಡಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರಬಹುದು. ಫೇಸ್‌ಬುಕ್ ಖಾತೆ ಹ್ಯಾಕ್ ಕೂಡಾ ಆಗಿರಬಹುದು ಎಂದಿದ್ದಾರೆ. 
 
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಕುರಿತಂತೆ ಚರ್ಚಿಸಲಾಗುವುದು ಇಂದು ಡಿವೈಎಸ್‌ಪಿ ಅನುಪಮಾ ಶೆಣೈ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ