ಹಸಿರು ಪಟಾಕಿ ಎಂದರೇನು.? ಸಾಮಾನ್ಯ ಪಟಾಕಿಗಳಿಗೂ ಇವುಗಳಿಗೂ ಏನು ವ್ಯತ್ಯಾಸ.?

ಮಂಗಳವಾರ, 2 ನವೆಂಬರ್ 2021 (19:59 IST)
ಬೆಳಕಿನ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲೆಡೆ ಪಟಾಕಿ ಸದ್ದು ಕೇಳಿಸುತ್ತಿದೆ. ಪಟಾಕಿಗಳಿಂದಾಗುವ ಮಾಲೀನ್ಯ ತಡೆಗಟ್ಟಲು ಕೆಲವು ರಾಜ್ಯಗಳು ಪಟಾಕಿ ಸುಡುವುದನ್ನು ನಿಷೇಧಿಸಿವೆ, ಇನ್ನೂ ಕೆಲವು ರಾಜ್ಯಗಳು ಹಸಿರು ಪಟಾಕಿ ಸುಡುವಂತೆ ಸೂಚಿಸಿವೆ. ಹಸಿರು ಪಟಾಕಿ ಸುಡಲು ಸೂಚಿಸಿದ್ದರೂ ಇದಕ್ಕೆ ಕಾಲಮಿತಿ ಇದೆ.
ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿ ವಿಭಿನ್ನ ಹೇಗೆ.?
ಹಸಿರು ಪಟಾಕಿಗಳು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಆವಿಷ್ಕಾರವಾಗಿವೆ. ಇವು ನೋಡಲು ಮಾಮೂಲಿ ಪಟಾಕಿಯಂತೆಯೇ ಕಾಣುತ್ತವೆ, ಹಾಗೂ ಶಬ್ದವೂ ಮಾಮೂಲಿ ಪಟಾಕಿಯಂತೆಯೇ ಇರುತ್ತದೆ. ಆದರೆ ಇದನ್ನು ಸಿಡಿಸಿದಾಗ ಆಗುವ ಮಾಲೀನ್ಯದ ಪ್ರಮಾಣ ಬೇರೆ ಪಟಾಕಿಗಳಿಗಿಂತ ಕಡಿಮೆ ಇದೆ.
ಈ ಪಟಾಕಿಗಳನ್ನು ಸಿಡಿಸುವುದರಿಂದ ಪರಿಸರಕ್ಕೆ ಸಾಮಾನ್ಯ ಪಟಾಕಿಗಳಿಗಿಂತ ಶೇ.50 ರಷ್ಟು ಕಡಿಮೆ ಹಾನಿ ಆಗಲಿದೆ.
ಹಸಿರು ಪಟಾಕಿಗಳಲ್ಲಿ ವಾಯುಮಾಲೀನ್ಯ ಉತ್ತೇಜಿಸುವ ಹಾನಿಕಾರಕ ರಾಸಾಯನಿಕ ಇರುವುದಿಲ್ಲ, ಕೆಲವು ಪಟಾಕಿಗಳಲ್ಲಿ ಇದ್ದರೂ ಅದರ ಪ್ರಮಾಣ ಕಡಿಮೆಯಾಗಿದೆ. ಮಾಮೂಲಿ ಪಟಾಕಿಗಳಿಗಿಂತ ಈ ಪಟಾಕಿಗಳಿಂದ ಹೆಚ್ಚು ಶಬ್ದ ಮಾಲೀನ್ಯವೂ ಆಗುವುದಿಲ್ಲ. ಇವುಗಳ ಗಾತ್ರ ಕಡಿಮೆ, ಹಾಗಾಗಿ ಶಬ್ದವೂ ಕಡಿಮೆ.  ಈ ಪಟಾಕಿಗಳಿಗಿಂದ ಉಂಟಾಗುವ ಗರಿಷ್ಠ ಶಬ್ದ ಮಾಲೀನು 110 ರಿಂದ 125 ಡೆಸಿಬಲ್‌ಗಳಷ್ಟಾಗಿದೆ.
ಸಾಮಾನ್ಯ ಪಟಾಕಿಗಳ ಶಬ್ದ 160 ಡೆಸಿಬಲ್ ಆಗಿರುತ್ತದೆ. ಅಲ್ಲದೇ ಈ ಪಟಾಕಿಗಳು ಮಾಮೂಲಿ ಪಟಾಕಿಗಳಿಗಿಂತ ಕಡಿಮೆ ದರಕ್ಕೆ ಸಿಗಲಿವೆ. ಸರ್ಕಾರಿ ನೋಂದಾಯಿತ ಅಂಗಡಿಗಳಲ್ಲಿ ಹಸಿರು ಪಟಾಕಿ ಖರೀದಿಸಬಹುದು. ಆನ್‌ಲೈನ್‌ನಲ್ಲಿಯೂ ಪಟಾಕಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ