ರಕ್ತದಾನದಿಂದ ಇವರನ್ನು ಹೊರಗಿಡುವುದಕ್ಕೆ ಸರ್ಕಾರದ ವಾದವೇನು?

ಗುರುವಾರ, 16 ಮಾರ್ಚ್ 2023 (10:14 IST)
ತೃತೀಯಲಿಂಗಿಗಳು, ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಎಂಎಸ್ಎಂ) ಮತ್ತು ಲೈಂಗಿಕ ಕಾರ್ಯಕರ್ತೆಯರು ರಕ್ತದಾನ ಮಾಡುವುದನ್ನು ನಿರ್ಬಂಧಿಸಿರುವ 2017ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ.

ಈ ಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ್ದು, ತಜ್ಞರಿಂದ ಜಾಗತಿಕವಾಗಿ ಮಾನ್ಯತೆ ಪಡೆದಿವೆ ಎಂದು ತಿಳಿಸಿದೆ. ಯುರೋಪಿಯನ್ ರಾಷ್ಟ್ರಗಳು ಲೈಂಗಿಕವಾಗಿ ಸಕ್ರಿಯವಾಗಿರುವ ಸಲಿಂಗಕಾಮಿಗಳು ರಕ್ತದಾನ ಮಾಡುವುದನ್ನು ನಿಷೇಧಿಸಿವೆ.

ಯುರೋಪಿಯನ್ ಪುರುಷರು-ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಬಗ್ಗೆ ಇಂಟರ್ನೆಟ್ ಸಮೀಕ್ಷೆ ಆಧರಿಸಿ ಈ ಕ್ರಮಕೈಗೊಂಡಿವೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್ನಲ್ಲಿ ತಿಳಿಸಿದೆ. ಭಾರತದ ರಕ್ತ ವರ್ಗಾವಣೆ ವ್ಯವಸ್ಥೆಯನ್ನು ಬಲಪಡಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ತದಾನ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ,

ಅದನ್ನು ಬಳಕೆ ಮಾಡುವ ಜನರಲ್ಲಿ ವಿಶ್ವಾಸ ಮೂಡಿಸುವುದು ಬಹಳ ಮುಖ್ಯ. ಜೀವವೊಂದು ಸಂಕಷ್ಟದಲ್ಲಿರುವ ಸಮಯದಲ್ಲಿ ರಕ್ತದಾನ ವ್ಯವಸ್ಥೆಯ ಹೊರತು ಜನರಿಗೆ ಬೇರೆ ಆಯ್ಕೆಗಳಿರುವುದು ಕಡಿಮೆ. ಸಂಗ್ರಹಿಸಲಾದ ರಕ್ತದ ಮಾದರಿಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬ ಬಗ್ಗೆ ರಕ್ತದಾನ ಮಾಡುವವರು ಹಾಗೂ ರಕ್ತವನ್ನು ಪಡೆಯುವವರು ಸಂಪೂರ್ಣ ವಿಶ್ವಾಸ ಇರಿಸುವುದು ಅಗತ್ಯ ಎಂದು ಸರ್ಕಾರ ಹೇಳಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ