ಪ್ರೇಮಿಗಳು ಓಡಿಹೋಗುತ್ತಿದ್ದಾಗ ತಡರಾತ್ರಿ ಆಗಿದ್ದೇನು? ಪಕ್ಕಾ ಶಾಕಿಂಗ್

ಸೋಮವಾರ, 17 ಜೂನ್ 2019 (19:18 IST)
ಪ್ರೇಮಿಗಳು ಓಡಿಹೋಗುತ್ತಿದ್ದಾಗ ತಡರಾತ್ರಿ ಆಗಬಾರದ ಘಟನೆ ಆಗಿ ಪ್ರಿಯತಮೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೈಕ್ ಅಪಘಾತವಾದ ಕಾರಣ ಯುವತಿಯೊಬ್ಬಳು ಮೃತಪಟ್ಟು, ಯುವಕ  ಗಾಯಗೊಂಡ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಾಳಗಿ ಕ್ರಾಸ್ ಹತ್ತಿರ ಈ ದುರ್ಘಟನೆ ಸಂಭವಿಸಿದೆ.

ವಿದ್ಯಾರ್ಥಿನಿ ಶೋಭಾ ಹಾಗೂ ಯುವಕ ಪ್ರವೀಣ ಇಬ್ಬರೂ ಪ್ರೀತಿಸುತ್ತಿದ್ದರು. ತಡರಾತ್ರಿ ಮನೆ ಬಿಟ್ಟು ಬೈಕ್ ಮೇಲೆ ಓಡಿ ಹೋಗುತ್ತಿದ್ದರು. ಒಂದೇ ಬಡಾವಣೆಯ ಅಕ್ಕಪಕ್ಕದ ನಿವಾಸಿಗಳಾಗಿದ್ದು ಇಬ್ಬರೂ ಪ್ರೀತಿಸುತ್ತಿದ್ದರು.  

ಊರು ಬಿಟ್ಟು ಬೈಕ್ ಮೇಲೆ ಪರಾರಿಯಾಗುತ್ತಿರುವಾಗ ತಡರಾತ್ರಿ ಬೈಕ್ ಅಪಘಾತವಾಗಿದೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕ ಗಾಯಗೊಂಡಿದ್ದಾನೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ