ಪ್ರಧಾನಿ ಮೋದಿ ಬಗ್ಗೆ ವಾಟ್ಸಪ್ ಮೆಸೇಜ್ ಮಾಡಿದ ಗ್ರೂಪ್ ಆಡ್ಮಿನ್ ಅರೆಸ್ಟ್!

ಗುರುವಾರ, 4 ಮೇ 2017 (07:03 IST)
ಬೆಂಗಳೂರು: ವಾಟ್ಸಪ್ ಗ್ರೂಪ್ ಗಳಲ್ಲಿ ಅವಹೇಳನಕಾರಿ ಮೆಸೇಜ್ ಹಾಕಿದರೆ ಗ್ರೂಪ್ ಆಡ್ಮಿನ್ ಗಳು ಕಠಿಣ ಪರಿಣಾಮ ಎದುರಿಸಬೇಕಾದೀತು ಎಂದು ಇತ್ತೀಚೆಗೆ ಹೊಸ ನಿಯಮ ಬಂದಿತ್ತು. ಅದರಂತೆ ಬೆಂಗಳೂರಿನಲ್ಲಿ ಗ್ರೂಪ್ ಆಡ್ಮಿನ್ ನ್ನು ಬಂಧಿಸಲಾಗಿದೆ.

 
ಬಾಲ್ಸ್ ಬಾಯ್ಸ್ ಎನ್ನುವ ವಾಟ್ಸಪ್ ಗ್ರೂಪ್ ನಲ್ಲಿ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡುವಂತಹ ಫೋಟೋ ರವಾನಿಸಲಾಗಿತ್ತು. ಈ ಸಂಬಂಧ 30 ವರ್ಷದ ಕೃಷ್ಣ ಸಣ್ಣ ತಮ್ಮ ನಾಯ್ಕ್ ಎಂಬಾತನನ್ನು ಹಾಗೂ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಕೃಷ್ಣ ಈ ಗ್ರೂಪ್ ನ ಆಡ್ಮಿನ್ ಆಗಿದ್ದಾರೆ. ಆನಂದ್ ಮನುನಾಥ್ ನಾಯಕ್ ಎಂಬಾತ ಪ್ರಧಾನಿ ಮೋದಿ ಫೋಟೋವನ್ನು ತಿರುಚಿ ಅಸಹ್ಯವಾಗಿರುವಂತೆ ರವಾನಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ.

ವಾಟ್ಸಪ್ ಗಳಲ್ಲಿ ಅವಹೇಳನಕಾರಿ ಮೆಸೇಜ್ ಕಳುಹಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರೂಪ್ ಆಡ್ಮಿನ್ ಒಬ್ಬರನ್ನು ಬಂಧಿಸುತ್ತಿರುವುದು ಇದೇ ಮೊದಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ