ಅಬ್ಬಾ ಮಳೆ ಸಾಕಾಯ್ತು ಚಳಿ ಯಾವಾಗ ಎನ್ನುವವರಿಗೆ ಇಲ್ಲಿದೆ ಉತ್ತರ
ಈ ಬಾರಿ ಬೇಗನೇ ಆರಂಭವಾಗಿದ್ದ ಮಳೆಗಾಲ ಅಕ್ಟೋಬರ್ ಅಂತ್ಯಕ್ಕೆ ಬಂದರೂ ಮುಗಿದಿಲ್ಲ. ಮೊದಲೇ ಹವಾಮಾನ ಇಲಾಖೆ ಈ ವರ್ಷ ಭಾರೀ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ಅದರಂತೆ ಈಗಲೂ ಮಳೆಯಾಗುತ್ತಲೇ ಇದೆ. ಹಾಗಿದ್ದರೆ ಕರ್ನಾಟಕದಲ್ಲಿ ಚಳಿಗಾಲ ಶುರುವಾಗೋದು ಯಾವಾಗ?
ಈ ವರ್ಷ ನವಂಬರ್ ತಿಂಗಳಿನಿಂದ ನಿಧಾನವಾಗಿ ಚಳಿಯ ವಾತಾವರಣ ಶುರುವಾಗಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಈ ವರ್ಷ ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲದ ಗರಿಷ್ಠ ಸಮಯವಾಗಿರುತ್ತದೆ ಎನ್ನಲಾಗಿದೆ.
ಈ ಬಾರಿ ಚಳಿಗಾಲವೂ ವಿಪರೀತ ಎನ್ನುವ ಸ್ಥಿತಿಗೆ ತಲುಪಬಹುದು ಎಂದು ಹವಾಮಾನ ವರದಿ ಹೇಳುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಉಷ್ಣತೆ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.ಇನ್ನೂ ಒಂದೆರಡು ವಾರ ಮಳೆ ಮುಂದುವರಿಯಲಿದ್ದು ಅದಾದ ಬಳಿಕ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆಯಿದೆ.