ಫೀವರ್ ಕ್ಲಿನಿಕ್ ಒಳಗೆ ಹೋಗಿ ಸಚಿವರೊಬ್ಬರು ಪರಿಶೀಲನೆ ನಡೆಸಿದ್ದಾರೆ.
ಕೋವಿಡ್-19 ಕೊರೊನಾ ರೋಗವು ಮುಖ್ಯವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಭೇದಿ ಮುಖಾಂತರ ಕಾಣಿಸಿಕೊಳ್ಳುತ್ತಿದೆ. ಮುಂಜಾಗೃತ ಕ್ರಮವಾಗಿ ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವ ಅವಶ್ಯಕತೆಯನ್ನು ಮನಗಂಡಿರುವ ಸರ್ಕಾರ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಸ್ಥಾಪಿಸಿರುವ ಫಿವರ್ ಕ್ಲಿನಿಕ್ ಗಳ ಕಾರ್ಯವನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪರಿಶೀಲಿಸಿದರು.
ಧಾರವಾಡದ ತೇಜಸ್ವಿ ನಗರದ ಪುರೋಹಿತ ನಗರದಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಫೀವರ್ ಕ್ಲಿನಿಕ್ ಗಳ ಕಾರ್ಯವಿಧಾನ ಪರಿಶೀಲಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, "ಫೀವರ್ ಕ್ಲಿನಿಕ್ ” ಗಳನ್ನಾಗಿ ಮಾರ್ಪಡಿಸಿದ ನಗರ ಆರೋಗ್ಯ ಕೇಂದ್ರಗಳಲ್ಲಿ ನೋವಲ್ ಕೊರೊನಾ ಸೋಂಕು ಲಕ್ಷಣ ಇರುವ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ ಎಂದರು.