ಜಲ ದಿಗ್ಭಂಧನಕ್ಕೆ ದೇವರೇ ಹೆದರಿ ಮಾಡಿದ್ದೇನು? ನಿಜಕ್ಕೂ ಇದು ಪವಾಡ

ಸೋಮವಾರ, 24 ಜೂನ್ 2019 (15:45 IST)
ಜಲ ದಿಗ್ಭಂಧನಕ್ಕೆ ದೇವರು ಹೆದರಿದ್ದಾನೆ.

ಜಲ ದಿಗ್ಭಂಧನಕ್ಕೆ ಹೆದರಿ ಮಳೆಯನ್ನು ಕರುಣಿಸಿದ್ದಾನೆ ದೇವರು. ಹೀಗಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಜಲ ದಿಗ್ಭಂಧನದಿಂದ ಮುಕ್ತಿಕಂಡಿದೆ ಸೂರ್ಯನಾರಾಯಣ ದೇವರು.

ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ಜಲ ದಿಗ್ಭಂಧನಕ್ಕೆ ಒಳಗಾಗಿದ್ದ ಸೂರ್ಯನಾರಾಯಣ ದೇವರು. ಮಳೆಗಾಗಿ ಪ್ರಾರ್ಥಿಸಿ  ಸೂರ್ಯನಾರಾಯಣ ದೇವರನ್ನು ಜಲ ದಿಗ್ಭಂಧನ ಹಾಕಿದ್ದ ಗ್ರಾಮಸ್ಥರು. ಸೂರ್ಯನಾರಾಯಣ ದೇವರ ಗರ್ಭ ಗುಡಿಯೊಳಗೆ ನೀರು ತುಂಬಿ ದೇವಸ್ಥಾನ  ಬಾಗಿಲು ಮುಚ್ಚಿದ್ದರು ಗ್ರಾಮಸ್ಥರು. ಕಳೆದ ಏಳು ದಿನಗಳಿಂದ ಜಲ ದಿಗ್ಭಂಧನದಲ್ಲಿದ್ದರು ಸೂರ್ಯನಾರಾಯಣ ದೇವರು.

ಮಳೆ ಕರುಣಿಸಿದ ಹಿನ್ನೆಲೆ ಇಂದು ಜಲ ದಿಗ್ಭಂಧನ ದಿಂದ ಮುಕ್ತಿ ನೀಡಿ ದೇವಸ್ಥಾನ  ದ್ವಾರ ತೆಗೆದಿದ್ದಾರೆ ಗ್ರಾಮಸ್ಥರು. ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿ ಹರಕೆ ತೀರಿಸಿದ್ದಾರೆ ಗ್ರಾಮಸ್ಥರು.

ಎಂ ಕೆ ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ ಸೇರಿದಂತೆ  ಜಿಲ್ಲೆಯ ಹಲವು ಕಡೆ  ಕಳೆ ಎರಡು ದಿನಗಳಿಂದ ಮಳೆಯಾಗುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ