ನಾನು ಲೋಕಸಭೆ ಅಭ್ಯರ್ಥಿ ಅಲ್ಲ ಅಂತ ಸಚಿವ ಪದೇ ಪದೇ ಹೇಳ್ತಿರೋದು ಏಕೆ?
ನಾನು ಲೋಕಸಭೆ ಚುನಾವಣೆಯ ಅಭ್ಯರ್ಥಿ ಅಲ್ಲ. ಹೀಗಂತ ಸಚಿವರೊಬ್ಬರು ಆಗಾಗ್ಗೆ ಹೇಳಿಕೆ ಕೊಡುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಲೋಕಸಭೆ ಚುನಾವಣೆಗೆ ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನ ಪಕ್ಷ ತೀರ್ಮಾನಿಸುತ್ತದೆ. ಹೀಗಂತ ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿ ಅಲ್ಲ ಎಂದು ಅವರು ಹೇಳಿದರು.
ಎಐಸಿಸಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಮುಖರು ಅಭ್ಯರ್ಥಿಯನ್ನ ಫೈನಲ್ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಮಾತ್ರ ಎಲ್ಲವನ್ನೂ ಕೇಳುವಂತಹ ಹಕ್ಕು ಇರೋದು. ನಮ್ಮ ಪಕ್ಷದವರು ಅಲ್ಲದಿದ್ದರೂ ಕೂಡ ಅವರ ಮಾತನ್ನ ಕೇಳುವಂತಹ ಸಹನೆ ಇರೋದು ನಮ್ಮ ಪಕ್ಷಕ್ಕೆ ಮಾತ್ರ. ಹಾಗಾಗಿ ಪಕ್ಷವೇ ಎಲ್ಲವನ್ನು ನಿರ್ಣಯಿಸಿ ಅಭ್ಯರ್ಥಿಯ ಆಯ್ಕೆ ಮಾಡುತ್ತದೆ ಎಂದು ಹೇಳಿದರು.