ಪತಿ ಮೇಲೆ ಅತ್ಯಾಚಾರ ಕೇಸ್ ದಾಖಲಿಸಿದ ಪತ್ನಿ!

ಗುರುವಾರ, 24 ಮಾರ್ಚ್ 2022 (11:07 IST)
ಬೆಂಗಳೂರು : ಅಪರೂಪದ ಪ್ರಸಂಗದಲ್ಲಿ ಪತಿಯ ವಿರುದ್ಧವೇ ಪತ್ನಿ  ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಒರಿಸ್ಸಾ ಮೂಲದ ದಂಪತಿಯ ಕುಟುಂಬದಲ್ಲಿ ವೈಮನಸ್ಸು ಏರ್ಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ  ಪತಿಯ ವಿರುದ್ಧವೇ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ.

ಇನ್ನೊಂದೆಡೆ ತಮ್ಮ ಮೇಲಿನ ಆರೋಪದ ಕುರಿತಾಗಿ ಅರ್ಜಿಯನ್ನು ರದ್ದುಪಡಿಸುವಂತೆ ಪತಿ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ.  ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಕಾರಣಕ್ಕಾಗಿ ಕೇಸ್ ದಾಖಲಿಸಲಾಗಿತ್ತು.

ತನ್ನನ್ನು ಲೈಂಗಿಕ ಗುಲಾಮಳಂತೆ ಪತಿ ಬಳಸಿಕೊಂಡಿದ್ದಾಗಿ ಪತ್ನಿ ಆರೋಪ ಮಾಡಿದ್ದಲ್ಲದೆ, ಅಪ್ರಾಪ್ತ ಮಗಳ ವಿರುದ್ಧವೂ ಪತಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನ್ನ ಮೇಲೆ ಸೇಡಿಗಾಗಿ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಇದನ್ನು ರದ್ದು ಮಾಡುವಂತೆ ಪತಿ ಕೋರ್ಟ್ ಗೆ ಮನವಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದ. ಈ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಅತ್ಯಾಚಾರ ಆರೋಪವನ್ನು ಕೈಬಿಡಲು ನಿರಾಕರಿಸಿದೆ.

ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಎಂದು ವಾದವನ್ನೂ ಮಂಡಿಸಲಾಗಿತ್ತು. ಆದರೆ, ಪತಿಯ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ನೇರವಾಗಿ ವಜಾ ಮಾಡಿದೆ.

 
ಈ ಬಗ್ಗೆ ನಮ್ಮ ಶಾಸಕಾಂಗ ಚಿಂತನೆ ನಡೆಸಬೇಕಿದೆ. ವಿಶ್ವದ ಮುಂದುವರಿದಂಥ ದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಪತ್ನಿಯ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ.

ಪತಿಯಾಗಲಿ, ಪತ್ನಿಯಾಗಲಿ ಇಚ್ಛೆಗೆ ವಿರುದ್ಧವಾಗಿ ಸಂಭೋಗಕ್ಕೆ ಒಳಗಾಗುವಂತಿಲ್ಲ. ಒತ್ತಾಯಪೂರ್ವಕವಾಗಿ ಇದು ನಡೆದಲ್ಲಿ ಅತ್ಯಾಚಾರ ಎಂದು ಪರಿಗಣನೆ ಮಾಡುತ್ತಾರೆ. ಇಂಗ್ಲೆಂಡ್ ನಲ್ಲಿಯೂ ಇಂಥದ್ದೊಂದು ವಿನಾಯಿತಿಯನ್ನು ತೆಗೆದುಹಾಕಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರೇಪ್ ವಿಚಾರದಲ್ಲಿ ಮಹಿಳೆ ಹಾಗೂ ಪತ್ನಿಯ ತಾರತಮ್ಯ ಸರಿಯಲ್ಲ. ವಿವಾಹ ಎನ್ನುವುದು ಪತ್ನಿಯ ಮೇಲೆ ದೌರ್ಜನ್ಯ ಎಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ