ಸೋಲುತ್ತೇವೆಂದು ಚುನಾವಣೆಯಲ್ಲಿ ಸ್ಪರ್ಧಿಸದಿರಲು ಆಗುತ್ತಾ: ಮಲ್ಲಿಕಾರ್ಜುನ್ ಖರ್ಗೆ

ಗುರುವಾರ, 20 ಜುಲೈ 2017 (18:45 IST)
ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾಕುಮಾರ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಸ್ಪರ್ಧಿಸದಿರಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
 
ನೂತನ ರಾಷ್ಟ್ರಪತಿಯಾಗಿ ರಾಮಾನಾಥ್ ಕೋವಿಂದ್ ಆಯ್ಕೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋಲು ಖಚಿತವೆಂದು ಚುನಾವಣೆಯಿಂದ ದೂರವಿರಲು ಸಾಧ್ಯವೇ? ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆ ಅಗತ್ಯ ಎಂದು ಪ್ರತಿಪಾದಿಸಿದರು.
 
ಯುಪಿಎ ಅಭ್ಯರ್ಥಿ ಮೀರಾಕುಮಾರ್ ಮೊದಲೇ ಹೇಳಿದಂತೆ ಇದು ನನ್ನ ಕೋವಿಂದ್ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ಸೈದ್ದಾಂತಿಕ ವಿಚಾರಗಳ ನಡೆಯುತ್ತಿರುವ ಚುನಾವಣೆ ಎಂದಿದ್ದನ್ನು ಸ್ಮರಿಸಿದರು.
 
ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಂತೆ ರಾಮಾನಾಥ್ ಕೋವಿಂದ್ ಕಾರ್ಯನಿರ್ವಹಿಸಲಿ. ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷ ಶುಭ ಹಾರೈಸುತ್ತದೆ ಎಂದು ತಿಳಿಸಿದ್ದಾರೆ.
 
ತತ್ವ ಸಿದ್ದಾಂತಗಳ ಮೇಲೆ ನಡೆದ ಚುನಾವಣೆಯಲ್ಲಿ ಹಿನ್ನೆಡೆಯಾಗಿ ಮೀರಾಕುಮಾರ್ ಪರಾಭವಗೊಂಡಿದ್ದಾರೆ. ಸೋಲಿನ ನಂತರ ಚರ್ಚೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಸೋಲುತ್ತೇವೆ ಎಂದು ಎಲ್ಲಾ ಚುನಾವಣೆಗಳನ್ನು ಬಿಜೆಪಿಗೆ ಬಿಟ್ಟುಕೊಡು ಆಗುತ್ತಾ ಎಂದು  ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ