ಪುಣೆಯಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರುತ್ತಾರಾ?

ಶುಕ್ರವಾರ, 1 ಮೇ 2020 (16:51 IST)
ಕೊರೊನಾ ಹಾಟ್ ಸ್ಪಾಟ್ ಆಗಿ ಮಹಾರಾಷ್ಟ್ರ ಪರಿವರ್ತನೆಗೊಂಡಿದೆ. ಆದರೆ ಪುಣೆಯಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಮರಳುವುದಕ್ಕೆ ರೆಡಿಯಾಗ್ತಿದ್ದಾರೆ. 

ಹೊರ ರಾಜ್ಯದಿಂದ ಜನರು ಆಗಮಿಸಲು ಅನುಮತಿ ಸಿಗುವ ಕುರಿತು ಶೀಘ್ರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

ಕೊರೊನಾ ಸಂಬಂಧಿತ ಲಾಕ್‍ಡೌನ್ ಹಿನ್ನೆಲೆ ಇತರ ರಾಜ್ಯಗಳಲ್ಲಿ ನೆಲೆಸಿರುವ ಜನರು ಇದೀಗ ತಮ್ಮ ಊರಿಗೆ ಬರಲು ತವಕ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹೊರ ರಾಜ್ಯದಲ್ಲಿ ನೆಲೆಸಿರುವ ಮೂಲ ಕರ್ನಾಟಕದವರನ್ನು ಕರೆಸಿಕೊಳ್ಳುವ ಬಗ್ಗೆ ಹಾಗೂ ಅಂತರ ರಾಜ್ಯ ಗಡಿಯನ್ನ ಮುಕ್ತ ಗೊಳಿಸುವ ಬಗ್ಗೆ ಅನುಮತಿ ನೀಡಿದೆ. ಈ ಬಗ್ಗೆ ನಿಯಮಾವಳಿಗಳು ರಚನೆಯಾಗುತ್ತಿದ್ದು, ಉಡುಪಿ ಜಿಲ್ಲಾಡಳಿತ ಹಾಗೂ ರಾಜ್ಯದ ಆಡಳಿತ ನಡುವೆ ನಿರಂತರ ಸಂಪರ್ಕದಲ್ಲಿ ನಾವಿದ್ದೇವೆ ಎಂದು ಶಾಸಕ ವಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ತುರ್ತು ಅಗತ್ಯವಿರುವವರಿಗೆ ಖಂಡಿತ ಊರಿಗೆ ಬರಲು ಅನುಮತಿ ಮಾಡಿಕೊಡುತ್ತೇವೆ. ಈ ಕುರಿತು ಯಾರೂ ತರಾತುರಿ ಮಾಡದೇ ಎಲ್ಲರೂ ಸಹಕರಿಸಬೇಕು ಎಂದು ಮುಂಬೈ, ಪುಣೆಯಲ್ಲಿ ನೆಲೆಸಿರುವ ಕನ್ನಡಿಗರನ್ನ ಉದ್ದೇಶಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶಾಸಕ ವಿ ಸುನೀಲ್ ಕುಮಾರ್ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ