ಕೊರೊನಾ ವೈರಸ್ ವಿರುದ್ಧ ಫೈಟ್ ಗೆ ಇಳಿದ ವಿಪ್ರೋ

ಗುರುವಾರ, 2 ಏಪ್ರಿಲ್ 2020 (19:12 IST)
ಕೋವಿಡ್ -19, ಕೊರೊನಾ ವೈರಸ್ ವಿರುದ್ಧ ಇದೀಗ ಬೃಹತ್ ಸಂಸ್ಥೆ ವಿಪ್ರೋ ಕಾರ್ಯಾಚರಣೆಗೆ ಇಳಿದಿದೆ.

ತುಮಕೂರಿನಲ್ಲಿರುವ ವಿಪ್ರೋ ಸಂಸ್ಥೆ ಕೋವಿಡ್-19 ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 5 ಲಕ್ಷ ಕರಪತ್ರಗಳನ್ನು ಮುದ್ರಿಸಿ ಪ್ರತಿ ಮನೆ-ಮನೆಗೆ ಕರಪತ್ರವನ್ನು ಹಾಗೂ ಎರಡೆರಡು ಸೋಪುಗಳನ್ನು ವಿತರಿಸುತ್ತಿದೆ. ವಯಕ್ತಿಕ ಸ್ವಚ್ಛತೆಗೆ ಮತ್ತು ಅರಿವು ಕಾರ್ಯಚಟುವಟಿಕೆಗೆ ಸಹಕಾರ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.  

ವಿಪ್ರೋ ಸಂಸ್ಥೆಯು ಸಿಎಸ್‌ಆರ್ ನಿಧಿಯಿಂದ ನೀಡಲಾಗುತ್ತಿದೆ. ಕೊರೋನಾವನ್ನು ನಿಯಂತ್ರಿಸುವ ಕುರಿತು 5 ಲಕ್ಷ ಕರಪತ್ರ ಮುದ್ರಿಸಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ವಿತರಿಸಲಾಗುವುದು ಹಾಗೂ ಪ್ರತಿ ಮನೆಗೆ 2 ಸೋಪುಗಳನ್ನು ನೀಡಲಾಗುವುದು ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ