ಉಡುಪಿ ನಗರದಲ್ಲಿ ಪ್ಲ್ಯಾಸ್ಟಿಕ್ ಇಲ್ಲದೇ ವಿವಾಹ ಕಾರ್ಯಕ್ರಮ

ಶುಕ್ರವಾರ, 24 ನವೆಂಬರ್ 2017 (15:26 IST)
ಉಡುಪಿ: ಉಡುಪಿ ಜಿಲ್ಲೆಯನ್ನು 2018 ಅಕ್ಟೋಬರ್ 2ರ  ಒಳಗಾಗಿ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಉಡುಪಿ ಜಿಲ್ಲಾಡಳಿತ ಘನ ಹಾಗೂ ದ್ರವ ಸಂಪನ್ಮೂಲ ನಿರ್ವಹಣೆ (ಎಸ್ ಎಲ್.ಆರ್.ಎಂ) ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಉಡುಪಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು.


ಈಗ ಪ್ಲಾಸ್ಟಿಕ್ ಎಲ್ಲರ ಅವಿಭಾಜ್ಯ ಅಂಗವಾಗಿದೆ. ಏನೇ ಕೊಳ್ಳಲು ಹೋದರು ಪ್ಲಾಸ್ಟಿಕ್ ಇಲ್ಲದೇ ವಾಪಾಸ್ ಬರುವುದಿಲ್ಲ. ಆದರೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ಅದೇನಪ್ಪಾ ಅಂದರೆ ಕುಂದಾಪುರ ತಾಲೂಕಿನಲ್ಲಿ ಒಂದು ವಿಶೇಷವಾದ ವಿಮಾಹ ಸಮಾರಂಭವೊಂದು ನಡೆಯಿತು. ಕುಂದಾಪುರ ತಾಲೂಕಿನ ಬಿಜಾಡಿ ಗ್ರಾಮದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶೀತಲ್ ಹಾಗೂ ಅಶ್ವತ್ ಅವರು ಪ್ಲಾಸ್ಟಿಕ್ ನಿರ್ಮೂಲನ ಕಾರ್ಯವನ್ನು ಎತ್ತಿಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು.


ಈ ಸಮಾರಂಭದಲ್ಲಿ ಆಮಂತ್ರಣಾ ಪತ್ರಿಕೆಯಿಂದ ಹಿಡಿದು, ಊಟದ ವ್ಯವಸ್ಥೆಯವರೆಗೂ ಎಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಲಿಲ್ಲ. ನೈಸರ್ಗಿಕ ಹೂಗಳನ್ನು ಬಳಸಿ ಮದುವೆ ಮಂಟಪವನ್ನು ಸಿಂಗರಿಸಿದರೆ, ನೀರು ಕುಡಿಯಲು ಸ್ಟೀಲ್ ಲೋಟ, ಊಟಕ್ಕೆ ಬಾಳೆ ಎಲೆಯನ್ನು ಬಳಸಲಾಗಿತ್ತು. ವಧು-ವರರ ಸಂಬಂಧಿಕರು ಕೂಡ ಯಾವುದೇ ಪ್ಲಾಸ್ಟಿಕ್ ಚೀಲಗಳ  ಬಳಕೆ ಮಾಡದೇ ಇರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ