ಸ್ವಂತ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಕಳ್ಳಿ

ಬುಧವಾರ, 18 ಮೇ 2022 (10:19 IST)
ಬೆಂಗಳೂರು: ಸ್ವಂತ ಮನೆಗೇ ಕನ್ನ ಹಾಕಿ ಪ್ರಿಯಕರನ ಜೊತೆ ಆರಾಮವಾಗಿರಲು ಯೋಜನೆ ರೂಪಿಸಿದ್ದ ಕಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

24 ವರ್ಷದ ದೀಪ್ತಿ ಮತ್ತು 27 ವರ್ಷದ ಮದನ್ ಬಂಧಿತರು. ಬಂಧಿತರಿಂದ ಆರು ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಪತಿಯಿಂದ ದೂರವಾಗಿದ್ದ ದೀಪ್ತಿ ತಾಯಿ ಮನೆಯಲ್ಲಿ ವಾಸವಿದ್ದಳು. ಈ ನಡುವೆ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಮದನ್ ಜೊತೆ ಪ್ರೀತಿ ಬೆಳದಿತ್ತು. ಆತನಿಂದ ದೂರವಿರುವಂತೆ ತಾಯಿ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಪ್ರಿಯಕರನ ಜೊತೆ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದೀಪ್ತಿ ತನ್ನ ತಾಯಿ ಮನೆಯಲ್ಲಿದ್ದ ಒಡವೆಗಳನ್ನು ಪ್ರಿಯಕರ ಮದನ್ ಜೊತೆ ಸೇರಿಕೊಂಡು ಕಳುವು ಮಾಡಿ ಆ ಜಾಗದಲ್ಲಿ ನಕಲಿ ಒಡವೆ ಇಟ್ಟಿದ್ದಳು. ಆದರೆ ತಾಯಿಗೆ ಒಡವೆ ಕಳುವಾದ ಮಾಹಿತಿ ಸಿಕ್ಕಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ