ಮಹಿಳಾ ಜಿಪಂ ಸಿಇಓ ಕಾರು ಅಪಘಾತ: ಪತಿ, ಮಗುವಿಗೆ ಗಾಯ

ಸೋಮವಾರ, 15 ಅಕ್ಟೋಬರ್ 2018 (16:15 IST)
ಜಿಲ್ಲಾ ಪಂಚಾಯಿತಿ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಸಿಇಓ, ಅವರ ಮಗು ಹಾಗೂ ಪತಿ ಗಾಯಗೊಂಡಿದ್ದಾರೆ.

ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಓ ಶಿಲ್ಪಾ ನಾಗ್ ಕಾರು ಅಪಘಾತವಾಗಿದೆ. ಹಾವೇರಿ ಸಮೀಪದ ದೇವಗಿರಿ ಬಳಿ ಅಪಘಾತ ಸಂಭವಿಸಿದೆ.

ಸಿಇಓ ಶಿಲ್ಪಾ ನಾಗ್ ಜತೆ ಪ್ರಯಾಣಿಸುತ್ತಿದ್ದ ಪತಿ, ಮಗು ಸೇರಿ ಮೂವರೂ ಗಾಯಗೊಂಡಿದ್ದಾರೆ.  ಹಾವೇರಿಯಿಂದ ಹುಬ್ಬಳ್ಳಿಗೆ ಹೊರಟಿದ್ದಾಗ ನಡೆದ ಘಟನೆ ಇದಾಗಿದೆ.

ಮೂವರಿಗೂ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಗೆ ರವಾನೆ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ