ಆಧಾರ್​ ಕಾರ್ಡ್​ ಮಾಡಿಸಲು ಮುಗಿಬಿದ್ದ ಮಹಿಳೆಯರು

ಗುರುವಾರ, 15 ಜೂನ್ 2023 (21:23 IST)
ನಾಳೆಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗೆ ಆಧಾರ್​ ಕಾಡ್೯ ಕಡ್ಡಾಯ ಹಿನ್ನೆಲೆ ಆಧಾರ್​ ತಿದ್ದುಪಡಿ ಕೇಂದ್ರಗಳಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ಕಲಬುರಗಿ ಜಿಲ್ಲೆಯ ನಾಡ ಕಚೇರಿ ಹಾಗೂ ಆಧಾರ ಸೇವಾ ಕೇಂದ್ರಗಳ ಬಳಿ ಹೊಸ ಆಧಾರ್ ಕಾರ್ಡ್​ ಮಾಡಿಸಲು ಹಾಗೂ ತಿದ್ದುಪಡಿ‌ ಮಾಡಿಸಲು ಮಹಿಳೆಯರು ಕ್ಯೂ ನಿಂತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಆಧಾರ್ ತಿದ್ದುಪಡಿ ಮಾಡಿಸಲು ಮಹಿಳೆಯರು ಪರದಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ