ಬೇಸಿಗೆಯಲ್ಲಿ ಹೆಲ್ಮೆಟ್ ಬೇಡ ಎಂದ ಮಹಿಳೆಯರು!

ಶುಕ್ರವಾರ, 8 ಮಾರ್ಚ್ 2019 (18:57 IST)
ಬೇಸಿಗೆ ಕಾಲದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯದಿಂದ ರಿಯಾಯಿತಿ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಮಹಿಳೆಯರು ಜಿಲ್ಲಾರಕ್ಷಣಾಧಿಕಾರಿಗಳಿಗೆ ಹೀಗಂತ ಮನವಿ ಸಲ್ಲಿಸಿದ್ದಾರೆ.  ಜಿಲ್ಲಾ ಎಸ್.ಪಿ. ಕಚೇರಿಗೆ ಭೇಟಿ ನೀಡಿದ ಮಹಿಳೆಯರು, ಬೇಸಿಗೆ ಕಾಲದಲ್ಲಿ, ತಾಪಮಾನ ಹೆಚ್ಚಾಗಲಿದ್ದು ಹೆಲ್ಮೆಟ್ ಧರಿಸಿದರೆ ಸೆಖೆಯಿಂದಾಗಿ, ಅನೇಕ ಖಾಯಿಲೆಗಳು ಬರುವ ಸಂಭವವಿದೆ.  ಉತ್ತರ ಕರ್ನಾಟಕ ಮಾದರಿಯಲ್ಲಿ ನಮ್ಮಲ್ಲಿಯೂ ಬೇಸಿಗೆ ಕಾಲದಲ್ಲಿ ಹೆಲ್ಮೆಟ್ ನಿಂದ ರಿಯಾಯಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಈಗಿನ್ನು ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ.  ಈಗಲೇ ವಿಪರೀತ ಬಿಸಿಲಿದೆ. ಜಿಲ್ಲೆಯಾದ್ಯಂತ ರಸ್ತೆ ಅಭಿವೃದ್ಧಿ, ಖಾಸಗಿ ಲೇಔಟ್ ಸರ್ಕಾರಿ ಲೆಔಟ್ ಹೆಸರಿನಲ್ಲಿ ಸಾಕಷ್ಟು ಮರಗಳ ಕಡಿತವಾಗಿವೆ. ಕಾಡು ಕೂಡ ನಾಶವಾಗಿದ್ದು, ವಿಪರೀತ ಬಿಸಿಲಿಗೆ ಇವೆಲ್ಲವೂ ಕಾರಣವಾಗಿವೆ. ಈಗಲೇ ಹೆಚ್ಚು ಬಿಸಿಲಿದೆ.  ಹೀಗಾಗಿ ಬೇಸಿಗೆ ಕಾಲದಲ್ಲಿ ಹೆಲ್ಮೆಟ್ ನಿಂದ ಕಡ್ಡಾಯ ಆದೇಶ ರದ್ದುಗೊಳಿಸಿ ಆದೇಶ ಹೊರಡಿಸಬೇಕು. 

ಹೆಲ್ಮೆಟ್ ಧರಿಸುವುದು, ಕಾನೂನು ಪಾಲನೆ ಮಾಡುವುದು ಕರ್ತವ್ಯವಾಗಿದ್ದರೂ ಕೂಡ ಬೇಸಿಗೆ ಮುಗಿಯುವವರೆಗೂ ಹೆಲ್ಮೆಟ್ ಧರಿಸುವಿಕೆಗೆ ರಿಯಾಯಿತಿ ನೀಡಬೇಕೆಂದು ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.  ಜಿಲ್ಲಾ ಎಸ್.ಪಿ. ಮೂಲಕ, ಗೃಹ ಸಚಿವರಿಗೂ ಕಾಂಗ್ರೆಸ್ ನ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ