ಶಾಸನ ಸಂಸತ್ ಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಆಗ್ರಹಿಸಿ ಇಂದು ದಿನಾಂಕ 12.9.2022 ರಂದು ಬೆಂಗಳೂರಿನ ಬಂಡಿರೆಡ್ಡಿ ವೃತ್ತದಲ್ಲಿ ಹಕ್ಕೊತ್ತಾಯ ಬಹಿರಂಗ ಸಭೆ ನಡೆಸಲಾಯಿತು. 1996 ರಿಂದ ಮಸೂದೆಯನ್ನು ನೆನೆಗುದಿಗೆ ತಳ್ಳಲಾಗಿದೆ. ಬಿಜೆಪಿ ಪಕ್ಷವು ಪಾರ್ಲಿಮೆಂಟಿನಲ್ಲಿ ಪೂರ್ಣ ಬಹುಮತ ಹೊಂದಿದೆ. ತನಗೆ ಅನುಕೂಲಕರ ಕಾಯ್ದೆಗಳನ್ನು ಚರ್ಚೆಗೂ ಆಸ್ಪದ ಕೊಡದೆ ಪಾಸು ಮಾಡಿಕೊಂಡಿದೆ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ ನೆನೆಗುದಿಗೆ ತಳ್ಳಿದೆ. ಈಗ ಸವಾಲು ಕೇಂದ್ರ ಸರಕಾರದ ಮುಂದಿದೆ. ನೀತಿ ನಿರೂಪಣೆಯಲ್ಲಿ ಮಹಿಳಾ ಭಾಗಿದಾರಿಕೆಯು ನಾಡಿನ ಸಮಗ್ರ ಅಭಿವೃದ್ಧಿಗಾಗಿನ ಅವಶ್ಯಕತೆಯಾಗಿದೆ. ಮಹಿಳಾ ಮೀಸಲಾತಿಯು ನಿಜದ ಅಭಿವೃದ್ಧಿಯ ಸಂಕೇತವಾಗಿದೆ. ಈ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ರಾಷ್ಟ್ರದ್ಯಾಂತ ಹೋರಾಟಕ್ಕೆ ಕರೆ ನೀಡಲಾಗಿತ್ತು. ಇದರ ಭಾಗವಾಗಿ ಬೆಂಗಳೂರಿನಲ್ಲಿ ಹೋರಾಟ ನಡೆಯಿತು.