ಮೈಸೂರು ರಾಜವಂಶದಲ್ಲೀಗ ಸಂಭ್ರಮ: ಯದುವೀರ ಅವರ ಪತ್ನಿ ತ್ರಿಷಿಕಾ ನಾಲ್ಕುತಿಂಗಳ ಗರ್ಭಿಣಿ

ಗುರುವಾರ, 15 ಜೂನ್ 2017 (08:45 IST)
ಮೈಸೂರು: ಮೈಸೂರು ರಾಜವಂಶಸ್ಥರಲ್ಲಿ ಇದೀಗ ಸಂತಸ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಸಂತಾನ ಭಾಗ್ಯದ ಸಂಭ್ರಮ. 
 
ಪ್ರಮೋದಾದೇವಿ ಒಡೆಯರ್‌ ಅವರ ದತ್ತುಪುತ್ರ ಯದುವೀರ ಅವರ ಪತ್ನಿ ತ್ರಿಷಿಕಾ ಗರ್ಭಧರಿಸಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ತ್ರಿಷಿಕಾ ಕುಮಾರಿ ಈಗ 4 ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಅರಮನೆ ಜ್ಯೋತಿಷಿ ಮಾಹಿತಿ ನೀಡಿದ್ದಾರೆ. ದಸರೆ ವೇಳೆಗೆ ಮಗು ಜನಿಸುವ ಸಾಧ್ಯತೆ ಇದೆ.
 
ಹಿಂದೂ ಸಂಪ್ರದಾಯದ ಪ್ರಕಾರ ಜನನ ಹಾಗೂ ಮರಣವು ಸೂತಕ. ಯಾವುದೇ ಶುಭಕಾರ್ಯ ನಡೆಸುವಂತಿಲ್ಲ. ಆದರೆ, ಸೂತಕವು ರಾಜಕುಟುಂಬಕ್ಕೆ ಅನ್ವಯಿಸದ ಕಾರಣ, ದಸರೆಯು ಎಂದಿನಂತೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ