ಯೋಗ ದಸರಾಗೆ ಅದ್ಧೂರಿ ಚಾಲನೆ

ಶುಕ್ರವಾರ, 12 ಅಕ್ಟೋಬರ್ 2018 (11:19 IST)
ಮೈಸೂರು ದಸರಾ ಮಹೋತ್ಸವ 2018ರ ಅಂಗವಾಗಿ ಯೋಗ ದಸರಾಗೆ ಉಸ್ತುವಾರಿ ಸಚಿವ ಚಾಲನೆ ನೀಡಿದ್ದಾರೆ.

ಮೈಸೂರಿನಲ್ಲಿ ಯೋಗ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ  ಜಿ.ಟಿ ದೇವೇಗೌಡ ಚಾಲನೆ ನೀಡಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ನಡೆಯುತ್ತಿರುವ ಯೋಗ ದಸರಾ ಇದಾಗಿದೆ. ಯೋಗ ಇಲ್ಲದೆ ಆರೋಗ್ಯ ಇಲ್ಲ. ಆರೋಗ್ಯ ಇಲ್ಲದೆ ಆಯುಷ್ಯ ಇಲ್ಲ ಎಂದು ಸಚಿವ ಜಿ.ಟಿ.ದೇವೇಗೌಡರು ಹೇಳಿದರು.

ಯೋಗ ಜೀವನದಲ್ಲಿ ಎಲ್ಲರಿಗೂ ಅವಶ್ಯಕವಾಗಿ ಬೇಕು. ಕಡ್ಡಾಯವಾಗಿ ಎಲ್ಲರೂ ಯೋಗ ಮಾಡಬೇಕು. ಕಾಲೇಜುಗಳಲ್ಲಿ ಯೋಗ ಶಿಕ್ಷಣ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.  

ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದುದು ಯೋಗವಾಗಿದೆ ಎಂದು ಸಚಿವ ಹೇಳಿದರು.
ಮಾಜಿ ಸಚಿವ, ಶಾಸಕ ರಾಮದಾಸ್, ಯೋಗ ಗುರುಗಳಾದ ಪ್ರಕಾಶ್ ಗುರೂಜಿ, ಜಿ.ಪಂ.ಸದಸ್ಯರಾದ ಚಂದ್ರಿಕ ಸುರೇಶ್, ಉದ್ಬೂರು ಮಹದೇವಸ್ವಾಮಿ ಇದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ