ಅನಿತಾ ಅವರನನ್ನ ಪ್ರಚಾರಕ್ಕೆ ಹೋದಾಗ ಗ್ರಾಮಸ್ಥರು ತಡೆದು ಹೊರ ಕಳುಹಿಸುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ವಿರುದ್ಧ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಸಿ.ಪಿ.ಯೋಗೀಶ್ವರ್ ಹೇಳಿಕೆ ನೀಡಿದ್ದು, ಎರಡು ಕ್ಷೇತ್ರದಲ್ಲಿ ಗೆದ್ದು ಕ್ಷೇತ್ರವನ್ನ ಉಳಿಸಿಕೊಂಡಿದ್ರಿಂದ ಈ ಉಪಚುನಾವಣೆ ಬಂದಿದೆ. ಮಧುಗಿರಿ ಕ್ಷೇತ್ರದಲ್ಲಿ ಇವರ ಅಭಿವೃದ್ಧಿ ಬಗ್ಗೆ ಕಂಡಿದ್ದೇವೆ. ಜೆಡಿಎಸ್ ಕಾರ್ಯಕರ್ತರಲ್ಲಿ ಪ್ರಚಾರದ ಹುಮ್ಮಸ್ಸು ಇಲ್ಲಾ ಎಂದು ಟೀಕೆ ಮಾಡಿದರು.
ಕನಕಪುರದ ನಾಯಕರು ಅನಿತಾ ಅವರನ್ನ ಗೆಲ್ಲಿಸಲು ಟೊಂಕಕಟ್ಟಿ ನಿಂತಿದ್ದಾರೆ. ಜೆಡಿಎಸ್ ಸ್ಥಳೀಯ ಅಭ್ಯರ್ಥಿಯನ್ನ ಯಾಕೆ ಚುನಾವಣೆಗೆ ಇಳಿಸಿಲ್ಲಾ ಎಂದು ಪ್ರಶ್ನಿಸಿದರು.
ತಂದೆ ಆಯ್ತು, ಮಗ ಆಯ್ತು, ಇದೀಗ ಸೊಸೆ ಬಂದಿದ್ದಾರೆ. ನೂರಾರು ಕೋಟಿ ಹಣ ಮಾಡಿದ್ದಾರೆ ಅನಿತಾ ಕುಮಾರಸ್ವಾಮಿ. ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಕೋಟಿ ಕೋಟಿ ಹಣ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಈಗಾಗಲೇ ಕ್ಷೇತ್ರದ ತುಂಬೆಲ್ಲಾ ಹಣದ ಹೊಳೆ ಹರಿಸುತ್ತಿದ್ದಾರೆ ಎಂದರು.