ಬೈಕ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಿಕ್ಕಿಬಿದ್ದ

ಸೋಮವಾರ, 7 ಸೆಪ್ಟಂಬರ್ 2020 (11:27 IST)
ಬೆಂಗಳೂರು: ಬೈಕ್ ನ ನಂಬರ್ ಪ್ಲೇಟ್ ಮೇಲೆ ಪೊಲೀಸ್ ಎಂದು ಅಕ್ರಮವಾಗಿ ಬರೆಸಿಕೊಂಡು ಓಡಾಡುತ್ತಿದ್ದ ಯುವಕನನ್ನು ಸಂಚಾರಿ ಪೊಲೀಸರು ಸೆರೆಹಿಡಿದಿದ್ದಾರೆ.


ಆಂಧ್ರದಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ಆಗಮಿಸಿದ್ದ ವ್ಯಕ್ತಿ ಬೈಕ್ ನ ನಂಬರ್ ಪ್ಲೇಟ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಲು ಮುಂದಾಗಿದ್ದ. ಆದರೆ ಈತನ ಮೇಲೆ ಸಂಶಯಗೊಂಡ ಕೆಆರ್ ಪುರ ಸಂಚಾರಿ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ತಂದೆ ಪೊಲೀಸ್ ಕಾನ್ಸ್ಟೇಬಲ್ ಎಂದು ಕತೆ ಕಟ್ಟಿದ್ದ. ಆದರೆ ಆತನ ನಿಜ ಗುಣ ಬಯಲಾದ ಬಳಿಕ 2000 ರೂ. ದಂಡ ಕಟ್ಟಿಸಿ ಬಿಟ್ಟು ಕಳುಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ