ಶಾಸಕ ಜಮೀರ್‌ ರಾಜಕೀಯ ಸ್ಥಿತಿ ಅತಂತ್ರ: ಆರ್.ಅಶೋಕ್ ವ್ಯಂಗ್ಯ

ಮಂಗಳವಾರ, 27 ಡಿಸೆಂಬರ್ 2016 (15:02 IST)
ಮೊದಲೇ ಶಾಸಕ ಜಮೀರ್ ಅಹ್ಮದ್‌ ಖಾನ್ ಅವರಿಗೆ ಮನೆ ಇಲ್ಲ. ಇದೀಗ ಜೆಡಿಎಸ್ ಬಾಗಿಲು ಸಹ ಮುಚ್ಚಿದೆ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಮೀರ್ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಉಚ್ಚಾಟನೆಯಾಗಿರುವ ಜಮೀರ್ ಅಹ್ಮದ್‌ ಖಾನ್ ಮೊದಲು ತನ್ನ ಮನೆ ಯಾವುದು ಎಂದು ಗುರುತಿಸಿಕೊಳ್ಳಲಿ. ನಂತರ ಬೇರೊಂದು ಪಕ್ಷದ ಕುರಿತು ಮಾತನಾಡಲಿ ಎಂದು ಖಾರವಾಗಿ ಹೇಳಿದರು.
 
ಶಾಸಕ ಜಮೀರ್ ಅಹ್ಮದ್‌ ಖಾನ್ ಸೇರಿದಂತೆ ಬಂಡಾಯ ಶಾಸಕರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಗೂ ಶಾಸಕ ಜಮೀರ್ ಅಹ್ಮದ್‌ ಸಂಪರ್ಕದಲ್ಲಿ ಯಾವ ಬಿಜೆಪಿ ನಾಯಕರು ಇಲ್ಲ ಸ್ಪಷ್ಟಪಡಿಸಿದರು. 
 
ಜೆಡಿಎಸ್‌ ಪಕ್ಷದ ಐವರು ಬಂಡಾಯ ಶಾಸಕರಾದ ಜಮೀರ್ ಅಹ್ಮದ್, ಶ್ರೀನಿವಾಸ್, ಚೆಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತು ಇಕ್ಬಾಲ್ ಅನ್ಸಾರಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂರನೇಯ ಅಭ್ಯರ್ಥಿ ಬೆಂಬಲಿಸಿದ್ದರು. ಹೀಗಾಗಿ ಇವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ