ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನಲ್ಲಿ ಝೀಕಾ ವೈರಸ್ ಮಗುವಿಗೆ ಪತ್ತೆ

ಗುರುವಾರ, 15 ಡಿಸೆಂಬರ್ 2022 (18:29 IST)
ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಕೋಳಿ ಕ್ಯಾಂಪ್ ಗೆ ಭೇಟಿ ನೀಡಿದ ಮಾನವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ನಂತರ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರಪ್ರಥಮ ಪ್ರಕರಣ ಝೀಕಾ ವೈರಸ್  ಇವತ್ತು ಪತ್ತೆಯಾಗಿದ್ದು ಬಹಳ ಗಂಭೀರ ವಿಷಯ ಈಗಾಗಲೇ ಪ್ರಕರಣ  ಪತ್ತೆಯಾಗಿದೆ ಇದರ ಬಗ್ಗೆ ಕುಲಂಕುಷವಾಗಿ ಪರಿಶೀಲನೆ ಮಾಡಿ ಎಂದರು.
 ಈ ಒಂದು ಝೀಕಾ ವೈರಸ್ ಬಗ್ಗೆ  ಏನೇನೋ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಈಗಾಗಲೇ ಝೀಕಾ ವೈರಸ್ ಬಂದಂತ ಮಗು ಆರೋಗ್ಯವಾಗಿದೆ ಯಾವುದೇ ಆತಂಕ ಪಡುವ ವಿಚಾರ ಇಲ್ಲ  ಆದರೆ ಈ ಒಂದು ಝೀಕಾ   ವೈರಸ್ ಮತ್ತೆ ಪುನರ್ವರ್ತನೆ ಆಗಬಾರದು ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ,ತಹಶೀಲ್ದಾರರಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಈಗಾಗಲೇ ನಿರ್ದೇಶನವನ್ನು ನೀಡಿದ್ದೇನೆ, ಈ ಒಂದು ಗ್ರಾಮದಲ್ಲಿ ಪಾಗಿಂಗ್,ಬೀಚಿಂಗ್ ಪೌಡರ್, ಇನ್ನು ಏನೇನು ಸೌಲಭ್ಯಗಳು ಕೊಡುವಂತ ಕೆಲಸ ಮಾಡಿ  ಮುಂಜಾಗ್ರತ ಕ್ರಮ ಕೈಗೊಂಡು ಕೆಲಸಗಳನ್ನು ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು,
 
 ಬರೀ ಕೋಳಿ ಕ್ಯಾಂಪ್ ಅಷ್ಟೇ ಅಲ್ಲ ಇಡೀ ಮಾನ್ವಿ ವಿಧಾನಸಭಾ ಕ್ಷೇತ್ರಾದ್ಯಂತ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸುವ ಜವಾಬ್ದಾರಿ ನಿಮ್ಮದಾಗಿದೆ, ನಾಳೆಯ ದಿನ ತಹಶೀಲ್ದಾರರ ಕಾರ್ಯಾಲಯದಲ್ಲಿ  ಝೀಕಾ ವೈರಸ್ ಬಗ್ಗೆ ಕುಲಂಕುಶವಾಗಿ ಚರ್ಚೆ ಮಾಡಲಿದ್ದೇನ ಎಂದರು
 
 ಈ ಒಂದು ಗ್ರಾಮಕ್ಕೆ ಭೇಟಿ ನೀಡಿ ಮಗುವನ್ನು ಮಾತನಾಡಿಸಿದ್ದೇನೆ ಅವರ ಪಾಲಕರನ್ನು ಕೂಡ ಮಾತನಾಡಿಸಿ ಝೀಕಾ ವೈರಸ್ ಬಗ್ಗೆ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಜೊತೆಗೆ ನಾನಿದ್ದೇನೆ  ಎಂದು ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ