ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿಯಾಗಿದ್ದು ಜಗದೋದ್ದಾರಕನ ಊರು ಮಧುರೆ ನೋಡಲು ಹೇಗೆ ಹೋಗಬಹುದು, ಯಾವ ದಾರಿಯಿದೆ ಎಂದು ಟ್ರಾವೆಲ್ ಗೈಡ್ ಇಲ್ಲಿದೆ ನೋಡಿ.
ಮಧುರೆ ಕೃಷ್ಣನ ಜನ್ಮನಗರಿ. ಬಳಿಕ ಅವನು ಬೆಳೆದಿದ್ದ ವೃಂದಾವನದಲ್ಲಿ. ದೇವಕಿಯ ಒಡಲಲ್ಲಿ ಹುಟ್ಟಿದ್ದರೂ ಯಶೋಧೆಯೇ ಅವನ ತಾಯಿಯಾದಳು. ಮಧುರೆಯಲ್ಲಿ ಈಗಲೂ ಮಧುರೆಯಲ್ಲಿ ಕೃಷ್ಣನಿಗೆ ಸಂಬಂಧಪಟ್ಟ ಅನೇಕ ತಾಣಗಳಿವೆ. ಆ ಸ್ಥಾನಗಳಿಗೆ ನಾವೂ ಭೇಟಿ ಕೊಡಬಹುದಾಗಿದೆ. ಕೃಷ್ಣ ಜನ್ಮಸ್ಥಾನ, ಮಂದಿರ ಸೇರಿದಂತೆ ಹಲವು ಪ್ರವಾಸೀ ತಾಣಗಳಿವೆ.
ಮಧುರೆ ಇರುವುದು ಉತ್ತರ ಪ್ರದೇಶ ರಾಜ್ಯದಲ್ಲಿ. ಬೆಂಗಳೂರಿನಿಂದ ಮಧುರೆಗೆ ರೈಲು ಪ್ರಯಾಣ ಮಾಡಬಹುದಾಗಿದೆ. ಆದರೆ ಬರೋಬ್ಬರಿ 36 ಗಂಟೆ ರೈಲು ಪ್ರಯಾಣ ಮಾಡಬೇಕಾಗುತ್ತದೆ. ಒಂದು ವೇಳೆ ರೈಲು ಪ್ರಯಾಣ ಕಷ್ಟವೆಂದರೆ ವಿಮಾನ ಮೂಲಕವೂ ಮಧುರೆಗೆ ತಲುಪಬಹುದು.
ಬೆಂಗಳೂರಿನಿಂದ ದೆಹಲಿಗೆ ವಿಮಾನ ಪ್ರಯಾಣ ಮಾಡಿ ಅಲ್ಲಿಂದ ಮಧುರೆಗೆ ರಸ್ತೆ ಮಾರ್ಗವಾಗಿ ಸಂಚರಿಸಬಹುದು. ಈ ರೀತಿ ಪ್ರಯಾಣ ಮಾಡಿದರೆ ವಿಮಾನ ಯಾನ ಪ್ಲಸ್ ರಸ್ತೆ ಮಾರ್ಗ ಸೇರಿದಂತೆ 8 ರಿಂದ 9 ಗಂಟೆ ಪ್ರಯಾಣದಲ್ಲಿ ಮಧುರೆ ತಲುಪಬಹುದು. ಬೆಂಗಳೂರಿನಿಂದ ಮಧುರೆಗೆ ಸುಮಾರು 1980 ಕಿ.ಮೀ.ಗಳಷ್ಟು ದೂರವಿದೆ. ಮಧುರೆಯಿಂದ ಕೃಷ್ಣ ಆಡಿ ನಲಿದ ವೃಂದಾವನ ತಲುಪಲು ನೇರ ಬಸ್ ವ್ಯವಸ್ಥೆಯಿದೆ. ಕೇವಲ ಅರ್ಧಗಂಟೆ ಪ್ರಯಾಣ ಮಾಡಿದರೆ ಸಾಕು.