ದಕ್ಷಿಣ ಭಾರತದ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ಚಿಂತನೆ ನಡೆಸಲಾಗಿದೆ ಎಂದು ಆಂಧ್ರ ಪ್ರದೇಶ ಪ್ರವಾಸೋದ್ಯಮದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇದನ್ನು ಪ್ರಕಟಿಸಿದ್ದಾರೆ.
ಮುಂದಿನ ಒಂದೂವರೆ ವರ್ಷಗಳಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ತಮಿಳು ನಾಡು ಮತ್ತು ಪುದುಚೇರಿಗಳ ಪ್ರಮುಖ ತಾಣಗಳಲ್ಲಿ ಸಂಚರಿಸಲಿರುವ 22 ಬೋಗಿಗಳ ರೈಲು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿದೆ.
ಇದರೊಂದಿಗೆ ವಿಶಾಖ ಪಟ್ಟಣ, ಅಂಡಮಾನ್ ದ್ವೀಪಗಳನ್ನು ಬೆಸೆಯುವ, ದಕ್ಷಿಣ ಭಾರತದ ಮೋಟಾರ್ ಬೋಟ್ ಪಯಣದ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದರ್ನ್ ಸ್ಪ್ಲೆಂಡರ್ ರೈಲು ದಕ್ಷಿಣದ ಪ್ರತಿಯೊಂದು ರಾಜ್ಯಗಳ ಬೋಗಿಗಳನ್ನು ಒಳಗೊಂಡಿರುತ್ತವೆ. ಆಯಾ ರಾಜ್ಯದ ಸಂಸ್ಕೃತಿ, ಆಹಾರ ಪದ್ಧತಿ,ಯೂ ಈ ರೈಲಿನ ವೈಶಿಷ್ಟ್ಯವಾಗಲಿದೆ.
ಇದರಿಂದ ದಕ್ಷಿಣ ರಾಜ್ಯಗಳ ಪ್ರವಾಸಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ ಎಂಬುದು ಆಂಧ್ರ ಪ್ರದೇಶ ಪ್ರವಾಸೋದ್ಯಮದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ ರೆಡ್ಡಿ ಅನಿಸಿಕೆ.