ಚೋರ್ ಪಕ್ಷದ ಚೌಕಿದಾರ್ ಮನರೆಗಾವನ್ನು ವಿರೋಧಿಸುತ್ತಾರೆ ಆದರೆ ಮನ್ರೆಗಾ ಬಡಜನರಿಗೆ ಉದ್ಯೋಗ ನೀಡುವ ಯೋಜನೆಯಾಗಿದೆ ಅಂತ ಮೋದಿ ವಿರುದ್ಧ ನಟಿಯೊಬ್ಬರು ಟೀಕೆ ಮಾಡಿದ್ದಾರೆ.
ಎಐಸಿಸಿ ವಕ್ತಾರೆ ಖುಷ್ಬು ಸುಂದರ್ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಪ್ರಣಾಳಿಕೆ ಜನಸಾಮಾನ್ಯರ ಅಭಿವೃದ್ಧಿ ದೇಶದ ಪ್ರಗತಿ, ಜಾತ್ಯಾತೀತ ಹೊಂದಾಣಿಕೆ, ಉದ್ಯೋಗ, ಗಡಿಸೈನ್ಯ, ದೇಶರಕ್ಷಣೆ ಸೇರಿದಂತೆ ಸಮಗ್ರ ಅಂಶವುಳ್ಳ ಪ್ರಣಾಳಿಕೆ ಇದಾಗಿದೆ ಎಂದರು.
ಮೋದಿಯ ಸರಕಾರದ 5 ವರ್ಷಗಳಲ್ಲಿ ಜನರು ಬೇಸತ್ತಿದ್ದಾರೆ. ದೇಶದ ಆರ್ಥಿಕತೆ ಕುಸಿದಿದೆ ಎಂದು ದೂರಿದರು.
72 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಬಿಜೆಪಿ ಅನಾವಶ್ಯಕವಾಗಿ ತೆಗಳುತ್ತಿದೆ ಎಂದ ಅವರು, ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನು ಕಾಂಗ್ರೆಸ್ ಮಾಡಿತೋರಿಸುತ್ತದೆ. ಆದರೆ ಜುಮ್ಲಾ ಬಿಜೆಪಿ 2014 ರಲ್ಲಿ ಜನರಿಗೆ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ ಎಂದರು.
ಸುಳ್ಳಿನಿಂದನೇ ಭರವಸೆ ಆರಂಭಿಸಿ ಸುಳ್ಳಿನಿಂದಲೇ ಬಿಜೆಪಿ ಅಂತ್ಯಗೊಳಿಸಿದೆ. ಶಾಸನಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿಲ್ಲ ಎಂದೂ ಜರಿದರು.