ಜೆಡಿಎಸ್, ಕಾಂಗ್ರೆಸ್ಸ್ ಸೆಕ್ಯುಲರಿಸ್ಟ್ ಅಂತಂದ್ರೆ ಒಪ್ಪಲ್ಲ ಎಂದ ನಟ ಪ್ರಕಾಶ್ ರಾಜ್

ಗುರುವಾರ, 11 ಏಪ್ರಿಲ್ 2019 (15:05 IST)
ನಾಲ್ಕು ತಿಂಗಳ ಹಿಂದೆ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದಾಗ ಬೇಡ ಎಂದಿದ್ದೆ. ರಾಜಕೀಯ ಪ್ರಜ್ಞೆ ಇರುವ ವ್ಯಕ್ತಿಯಾಗುವ ಬದಲು ಆಳುವ ಪಕ್ಷವನ್ನು ಪ್ರಶ್ನೆ ಮಾಡುವ ವ್ಯಕ್ತಿಯಾಗಬೇಕು. ನಾನು ನಿರಂತರ ಆಕ್ಟಿವಿಷ್ಟ್ ಆಗಿರೋದಕ್ಕೆ ಗೌರಿ ಲಂಕೇಶ್ ಹತ್ಯೆ ಕಾರಣ. ಹೀಗಂತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಪ್ರಕಾಶ್ ರಾಜ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದಲ್ಲಿ ಮಾತನಾಡಿ, ನಾನು ಸುಮ್ಮನಿದ್ದರೆ ಮತ್ತೊಂದು ಹತ್ಯೆಯಾಗಬಹುದು ಅಂತಾ ನಾನು ದೊಡ್ಡ ಧ್ವನಿಯಾದೆ. ಆದರೆ ಗೌರಿ ಹತ್ಯೆ ಚುನಾವಣೆಗೆ ಬರಲು ಕಾರಣವಲ್ಲ. ಇವತ್ತಿನ ರಾಜಕಾರಣ ನೋಡೋದಾದ್ರೆ, ಪ್ರಜೆ ಪ್ರಜ್ಞಾ ಪೂರ್ವಕವಾಗಿ ಮತ ಚಲಾಯಿಸಬೇಕು. ನಾನು ಕಳೆದ 6 ತಿಂಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಬೆಂಗಳೂರು ಸೆಂಟರ್ ನಲ್ಲಿ 2000 ಸ್ಲಂ ಗಳಿದ್ದಾವೆ. ಅವರನ್ನೆಲ್ಲಾ ಮೂಲೆ ಗುಂಪು ಮಾಡಲಾಗಿದೆ. ಶಾಲೆ, ಆಸ್ಪತ್ರೆಗೆ ಜಾಹಿರಾತು ನೀಡಬೇಕಾಗುತ್ತದೆ ಅಂತಾ ಅಂದುಕೊಂಡಿರಲಿಲ್ಲ. ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ, ಭ್ರಷ್ಟಾಚಾರ ತುಂಬಿದೆ ಎಂದರು.

ಇನ್ನು ಚುನಾವಣೆ ಅನ್ನೋದು ಒಂದು ಹಬ್ಬ. ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಆಲ್ಟರ್ ನೇಟ್ ಅಲ್ಲ. ಕರ್ನಾಟಕ ಪರ್ಯಾಯ ರಾಜಕಾರಣಕ್ಕೆ ರೆಡಿಯಾಗಿದೆ. ಆ ಬೀಜ ಬಿತ್ತೋವ್ರು ಯಾರು..? ಎಂದರು.

ನಾನು ಭ್ರಮಾ ರಾಜಕಾರದಲ್ಲಿಲ್ಲ. ಪರ್ಯಾಯ ರಾಜಕಾರಣ ಬೇಕು. ಜೆಡಿಎಸ್- ಕಾಂಗ್ರೆಸ್ ಸೆಕ್ಯುಲರಿಸ್ಟ್ ಅಂತ ಹೇಳಿದ್ರೆ ನಾವು ಒಪ್ಪಕೊಳ್ಳಬೇಕಾಗಿಲ್ಲ ಅಂತ ನಟ ಪ್ರಕಾಶ್ ರಾಜ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ