ಎಲ್ಲವೂ ವಿಧಿಯ ಆಟವೇ....?

IFM
ಕಾಲೇಜಿನಲ್ಲಿ ಓದು, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯು ಮಿಂಚುತ್ತಿದ್ದ ರಾಜ್ ಮಲೋತ್ರ (ಶಾಹಿದ್ ಕಪೂರ್) ಬಹುಮುಖ ಪ್ರತಿಭಾವಂತ. ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದು ನಾಲ್ಕು ವರ್ಷಗಳೇ ಕಳೆದಿದ್ದರು, ತನ್ನಂತಹ ಪ್ರತಿಭಾವಂತನಿಗೆ ವೃತ್ತಿ ಜೀವನದಲ್ಲಿ ಮಿಂಚುವ ಒಂದು ಅವಕಾಶವು ಸಿಗದಿರುವ ಬಗ್ಗೆ ರಾಜ್‌ ಚಿಂತಿತನಾಗುತ್ತಾನೆ.

ಇವೆಲ್ಲವು ಅವನನ್ನು ಹಿಂಬಾಲಿಸುತ್ತಿರುವ ದುರ್ವಿಧಿಯ ಫಲವೇ? ಏಕೆಂದರೆ ಏನಾದರು ಒಳಿತಾಗುತ್ತದೆ ಎನ್ನುವಷ್ಟರಲ್ಲಿ ಅದು ಸೋಲಾಗಿ ಪರಿವರ್ತಿತಗೊಳ್ಳುತ್ತಿತ್ತು

ಇಲ್ಲವಾದರೆ, ಅವನೊಂದು ಮುಖ್ಯವಾದ ನಿರ್ಣಾಯಕ ಮಿಟಿಂಗಿಗೆ ತೆರಳುವ ಅವಸರದಲ್ಲಿರುವಾಗಲೆಲ್ಲ ಒಂದೋ ಅಲಾರಂ ಬಡಿಯುವುದೇ ಇಲ್ಲ. ಇಲ್ಲವಾದರೆ, ಸ್ನಾನ ಮಾಡುತ್ತಿರುವಾಗ ಅರ್ಧದಲ್ಲೆ ನೀರು ನಿಂತು ಹೋಗುತ್ತದೆ, ಕಾರು ಸ್ಟಾರಟ್ ಆಗಲೊಲ್ಲದು. ಯಕೆ? ಇದು ಯಾಕೆ ಹೀಗೆ? ಇವೆಲ್ಲದರ ಫಲಿತಾಂಶ ಒಂದೆ ಆಗಿರುತ್ತಿತ್ತು? ಆಗಬೇಕಿದ್ದ ಒಪ್ಪಂದ ಮುರಿದು ಬೀಳುತಿತ್ತು ಅಥವಾ ಗ್ರಾಹಕರು ಉರಿದು ಬೀಳುತಿದ್ದರು.
IFM


ತನ್ನೊಂದಿಗೆ ಆಟವಾಡುತ್ತಿರುವ ಕಿಸ್ಮತ್ (ಅದೃಷ್ಟ)ನೊಂದಿಗೆ ಹೋರಾಡಿ ಹತಾಶನಾದ ರಾಜ್ ಭವಿಷ್ಯ ತಿಳಿಯಲು ಜ್ಯೋತಿಷಿ ಹಸೀನಾ ಬಾನೊ ಜಾನ್‌(ಜೂಹಿ ಚಾವ್ಲ)ಳನ್ನು ಭೇಟಿಯಾಗುತ್ತಾನೆ. ಆಕೆ ಇಷ್ಟರಲ್ಲೆ ಅವನ ಅದೃಷ್ಟದ ನಕ್ಷತ್ರಗಳು ಬದಲಾಗಲಿದ್ದು ಎಲ್ಲವು ಒಳಿತಾಗುತ್ತದೆ ಎಂದು ತಿಳಿಸುತ್ತಾರೆ. ಆದರೆ ಇದಕ್ಕಾಗಿ ರಾಜ್ ತನ್ನ ಅದೃಷ್ಟದ ವಸ್ತುವನ್ನು ಹುಡುಕಬೇಕು ಮತ್ತು ಅದನ್ನು ದೂರಾಗಲು ಬಿಡಬಾರದು ಎಂದು ತಿಳಿಸಿ ಬೇರಾವುದೆ ಮಾಹಿತಿ ನೀಡದೆ ರಾಜ್‌ನನ್ನು ಗೊಂದಲಕ್ಕೀಡು ಮಾಡುತ್ತ ತನ್ನ ಅದೃಷ್ಟದ ವಸ್ತುವನ್ನು ಹುಡುಕುವ ಕೆಲಸವನ್ನು ಅವನಿಗೇ ಬಿಟ್ಟುಬಿಡುತ್ತಾಳೆ.

ಇದ್ದಕ್ಕಿದ್ದಂತೆ ಅವನ ಜೀವನ ಸರಿಯಾದ ದಾರಿಗೆ ಹೊರಳುತ್ತದೆ. ಅವನು ದೊಡ್ಡ ಬಿಲ್ಡರ್ ಸಂಜೀವ್ ಗಿಲ್ (ಒಮ್ ಪುರಿ)ಯನ್ನು ಮೆಚ್ಚಿಸಿ ಪ್ರತಿಷ್ಠಿತ ಯೋಜನೆಯೊಂದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ.

IFM
ಕಠಿಣ ಮಾತುಗಳನ್ನಾಡುವ, ದೃಡವಾದ ನಿರ್ಧಾರ ಕೈಗೊಳ್ಳುವ, ಆದರೆ ಹೃದಯವಂತಿಕೆಯುಳ್ಳ ಹುಡುಗಿ ಪ್ರಿಯ. ಒಬ್ಬ ಆದರ್ಶವಾದಿಯಾಗಿರುವ ಪ್ರಿಯ ಜಗತ್ತನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂದು ಬಯಸುವವಳು ಹಾಗು ಇದಕ್ಕಾಗಿ ಒಂಟಿಯಾಗಿ ಹೋರಾಡುವ ಛಾತಿಯುಳ್ಳ ಹುಡುಗಿ. ಮಾತಿಗಿಂತ ಕೃತಿ ಲೇಸು ಎಂಬ ಜಾಯಮಾನದವಳು. ತನ್ನ ಗುರಿ, ತನ್ನ ಜನ, ಮತ್ತು ತನ್ನ ಪ್ರೀತಿಗಾಗಿ ತನ್ನೆಲ್ಲವನ್ನು ನೀಡುವ ಅವಳು ಬದಲಾಗಿ ಏನನ್ನು ಬಯಸದ ನಿಸ್ವಾರ್ಥಿ.

ಸುಂದರಿ ಪ್ರಿಯಳನ್ನು ಒಲಿಸಿಕೊಳ್ಳುವಲ್ಲಿ ರಾಜ್ ಯಸಸ್ವಿಯಾಗುತ್ತಾನೆ. ಅವಳ ಪ್ರೀತಿಯ ಸಮುದಾಯವನ್ನು ನಾಶದಿಂದ ರಕ್ಷಿಸಬಲ್ಲ ಮಹಾಪುರುಷನೇ ?

ತನ್ನ ಕಾಲೇಜು ದಿನಗಳ ವೈರಿ ದಾವೆ ಕತಾರಿಯ(ಮನೋಜ್ ಬೊಹರ) ರಚಿಸುವ ದುಷ್ಟ ಯೋಜನೆಗಳನ್ನು ನಿಷ್ಪಲಗೊಳಿಸುವಲ್ಲಿಯು ಸಹ ರಾಜ್ ಯಶಸ್ವಿಯಾಗುತ್ತಾನೆ.

ರಾಜ್ ತನಗೇ ಗೊತ್ತಿಲ್ಲದಂತೆ ತನ್ನ ಅದೃಷ್ಟದ ವಸ್ತುವನ್ನು ಕಂಡುಕೊಂಡನೆಂದು ಇದರರ್ಥವೇ? ಕೊನೆಗೆ ಅವನ ಪ್ರೀತಿ ಅವನಿಗೆ ಒಲಿಯಿತೇ ? ಹೊಸದಾಗಿ ಒಲಿದ ಅದೃಷ್ಟ ರಾಜ್‌ನನ್ನು ಎಲ್ಲಿಯವರೆಗೆ ಕೊಂಡ್ಯೊಯಿತು? ಪ್ರೀತಿಯನ್ನು ಪಡೆಯುವಷ್ಟರ ಎತ್ತರಕ್ಕೆ ಅಥವಾ ಯಶಸ್ಸಿನ ಪರಮ ಶೃಂಗಕ್ಕೆ ? ಈ ಎಲ್ಲದಕ್ಕೂ 'ಕಿಸ್ಮತ್ ಕೊನೆಕ್ಷನ್' ಉತ್ತರ ಹೇಳುತ್ತದೆ