ಜಾನ್, ಕತ್ರಿನಾರ 'ನ್ಯೂಯಾರ್ಕ್' ಜೂ.26ಕ್ಕೆ ತೆರೆಗೆ

PR
ಯಶ್ ರಾಜ್ ಫಿಲ್ಮ್ಸ್ ಅವರ ತೀವ್ರ ನಿರೀಕ್ಷೆ ಕೆರಳಿಸಿದ್ದ 'ನ್ಯೂಯಾರ್ಕ್' ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಿಸಲಾಗಿದೆ. ಈ ಚಿತ್ರ ನಿರ್ಮಾಣ ಸಂಸ್ಥೆಯಿಂದ ಬಂದಿರುವ ಈ ವರ್ಷದ ಮೊತ್ತ ಮೊದಲ ಚಿತ್ರ ನ್ಯೂಯಾರ್ಕ್, ಜೂನ್ 26ರಂದು ತೆರೆ ಕಾಣಲಿದೆ.

ಕಬೀರ್ ಖಾನ್ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಕತ್ರಿನಾ ಕೈಫ್, ನೀಲ್ ನಿತಿನ್ ಮುಖೇಶ್ ಮತ್ತು ಇರ್ಫಾನ್ ಖಾನ್ ಅವರು ಪ್ರಧಾನ ಭೂಮಿಕೆಗಳಲ್ಲಿದ್ದಾರೆ.

'ನ್ಯೂಯಾರ್ಕ್' ಚಿತ್ರವು ಅಮೆರಿಕದ ಈ ಯಾಂತ್ರೀಕೃತ ಪಟ್ಟಣದಲ್ಲಿ ಅರಳುವ ಗೆಳೆತನದ ಹೂದೋಟದಲ್ಲಿ ಪ್ರೀತಿ-ಪ್ರೇಮದ ಗಾಥೆಯಿರುವ ಕಥಾನಕ. ಜನ ಸಾಮಾನ್ಯರಿಗೆ ವಿಶ್ವದಲ್ಲಿ ನಡೆಯುವ ದೊಡ್ಡ ದೊಡ್ಡ ಸಂಗತಿಗಳು ಕೇವಲ ಸುದ್ದಿಪತ್ರಿಕೆಗಳ ತಲೆಬರಹಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ಈ ಸಂಗತಿಗಳು ನಮ್ಮ ಜೀವನವನ್ನೂ ಬದಲಾಯಿಸಬಲ್ಲುದು ಎಂಬ ಸಂದೇಶ ನೀಡುತ್ತದೆ ನ್ಯೂಯಾರ್ಕ್ ಚಿತ್ರ.

ಮೂರು ಯುವ ಮಿತ್ರರ ಸುಂದರ ಜೀವನವು ಅವರ ನಿಯಂತ್ರಣಕ್ಕೆ ಹೊರತಾದ ಘಟನಾವಳಿಗಳಿಂದಾಗಿ ಘಾಸಿಗೊಳ್ಳುವ ಕಥಾವಸ್ತು ಇದರಲ್ಲಿದೆ.

ವೆಬ್ದುನಿಯಾವನ್ನು ಓದಿ