8: ಇದು ಧ್ಯಾನ್ ನಾಯಕತ್ವದ ಹಾರರ್ ಚಿತ್ರ!

IFM
ಬಹುತೇಕರು ಮಾನವನ ಆತ್ಮಕ್ಕೆ ಒಂದು ಧಾರ್ಮಿಕ ಯಾತ್ರೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಂದು ಆತ್ಮವೂ ಮಾನವನ ರೂಪದಲ್ಲಿ ಹಲವನ್ನು ಪಡೆದುಕೊಳ್ಳಲು ಬಯಸುತ್ತದೆ. ಆದರೆ ಹಾಗೆ ಆತ್ಮ ತನ್ನ ಯಾತ್ರೆಯನ್ನು ಪೂರ್ತಿಯಾಗಿ ಮುಗಿಸುವ ಮೊದಲೇ ವಿಧಿ ಮಾನವನ ರೂಪವನ್ನು ಕಸಿಯುತ್ತದೆ. ಅರ್ಥಾತ್ ಮಾನವ ಸಾಯುತ್ತಾನೆ. ಹೀಗೆ ಮಾನವ ರೂಪದಲ್ಲಿ ಪಡೆದುಕೊಳ್ಳಲಾಗದ್ದನ್ನು ಆ ಆತ್ಮ ಬೇರೆಯೇ ರೂಪದಲ್ಲಿ ಅರ್ಥಾತ್ ಅತೀಂದ್ರೀಯ ರೂಪದಲ್ಲಿ ಪಡೆದುಕೊಳ್ಳುತ್ತದೆ ಎಂಬುದು ಲೋಕ ರೂಢಿ ನಂಬಿಕೆ. 8 ಎಂಬ ಈ ಚಿತ್ರ ಕೂಡಾ ಅಂಥದ್ದೇ ಒಂದು ಕಥೆ. ಮಾನವ ರೂಪಿ ಆತ್ಮವೊಂದು ಸಾವಿನ ನಂತರ ತನ್ನ ಆಸೆಗಳನ್ನು ಪೂರೈಸಲು ತಳೆಯುವ ರೂಪದ ಭಯಾನಕ ಹಾರರ್ ಚಿತ್ರವೇ ಈ 8.

ಚಿತ್ರದ ಹೆಸರೇ 8. ಚಿತ್ರದಲ್ಲಿ ಮುರಳಿ (ಸಮೀರ್ ದತ್ತಾನಿ, ಕನ್ನಡದ ಧ್ಯಾನ್) ಒಬ್ಬ ಸಂಗೀತಕಾರ. ಬ್ಯುಸಿ ಲೈಫ್‌ನಿಂದ ಹೊರಬರಲು ಮುರಳಿ ಅಡ್ಡಾಡಿಕೊಂಡು ಬರಲೆಂದು ವಾರಗಳ ಕಾಲ ರಾಜಸ್ತಾನದ ರೆಸಾರ್ಟ್ ಒಂದಕ್ಕೆ ರಜೆ ಕಳೆಯಲು ಹೋಗುತ್ತಾನೆ. ಹಾದಿಯಲ್ಲಿ ಆತನಿಗೆ ಸಂಜನಾ (ಶೀನಾ ನಾಯರ್) ಪರಿಚಯವಾಗುತ್ತಾಳೆ. ಮುರಳಿಗೆ ಆಕೆಯ ಭವಿಷ್ಯವೇ ದೊಡ್ಡ ಪ್ರಶ್ನೆಯಾಗತೊಡಗುತ್ತದೆ. ಆದರೂ ಆಕೆಯನ್ನು ಇಷ್ಟಪಡುತ್ತಾನೆ.

IFM
ಹೀಗೆ ಅವರು ರೆಸಾರ್ಟ್ ತಲುಪುತ್ತಾರೆ. ಆದರೆ ರೆಸಾರ್ಟ್‌ಗಿಂತ ಸ್ವಲ್ಪವೇ ದೂರದಲ್ಲಿ ನಡೆದ ಅಫಘಾತವೊಂದರಿಂದಾಗಿ ಹಲವು ಪ್ರಯಾಣಿಕರೂ ಮುರಳಿಯಿದ್ದ ರೆಸಾರ್ಟ್‌ಗೆ ಬರುತ್ತಾರೆ. ಈ ಸಂದರ್ಭ ಮುರಳಿ ಸಂಜನಾಳನ್ನು ತುಂಬ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದು ಆಕೆಯನ್ನು ಬೆಚ್ಚಗಿಡುತ್ತವೆ.

ಸಂಜನಾ ತನ್ನ ಹಳೆಕಥೆಯನ್ನು ಮುರಳಿಗೆ ಹೇಳುತ್ತಾಳೆ. ಆಕೆ ಪ್ರೀತಿಸುತ್ತಿದ್ದ ಹುಡುಗನನ್ನೇ ಮದುವೆಯಾಗಲೆಂದು ಅಪ್ಪ, ಅಮ್ಮನಿಗೆ ಹೇಳದೆ ಕೇಳದೆ ಮನೆ ಬಿಟ್ಟು ಓಡಿ ಬಂದಿರುತ್ತಾಳೆ. ಆದರೆ ಆಕೆಯ ಬಾಯ್‌ಫ್ರೆಂಡ್ ಆಕೆಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಆದರೆ ಸಂಜನಾ ಅಪ್ಪನ ಭಯದಿಂದ ಮನೆಗೆ ಹೋಗುವುದಿಲ್ಲ. ಅಂತಹ ಸಂದರ್ಭ ಮುರಳಿ ಸಿಕ್ಕಿರುತ್ತಾನೆ. ಆದರೆ ಮುರಳಿ ಆಕೆಯನ್ನು ತಂದೆಗೆ ಫೋನ್ ಮಾಡಲು ಒತ್ತಾಯಿಸುತ್ತಾನೆ. ಆಕೆ ತನ್ನ ತಂದೆಗೆ ಫೋನ್ ಮಾಡಿ ಕ್ಷಮೆ ಕೇಳುತ್ತಾಳೆ. ಮುರಳಿಯ ಈ ವರ್ತನೆ ಆಕೆಯನ್ನು ಮುರಳಿಯೆಡೆಗೆ ಆಕರ್ಷಿತಳಾಗುವಂತೆ ಮಾಡುತ್ತವೆ. ಇಂತಹ ಒಂದು ಸುಂದರ ಲವ್ ಸ್ಟೋರಿ ನಡೆಯುವ ಸಂದರ್ಭವೇ ಭಯಾನಕತೆಯ ಪ್ರಪಂಚವೂ ತೆರೆದುಕೊಳ್ಳುತ್ತದೆ. ವಿಚಿತ್ರವಾದ ಘಟನೆಗಳು ಅವರ ಜೀವನದಲ್ಲಿ ನಡೆಯಲಾರಂಭಿಸುತ್ತದೆ. ಎರಡು ಶವಗಳು ಆಕೆಯ ಬಳಿ ಮಾತನಾಡುತ್ತವೆ ಹಾಗೂ ಆಕೆಯನ್ನು ಮಲ್ಲಿಕಾ ಎಂದು ಕರೆಯುತ್ತವೆ.

IFM
ಇಲ್ಲಿಂದ ಮಲ್ಲಿಕಾಳ ಕಥೆ ಆರಂಭವಾಗುತ್ತದೆ. ಮುರಳಿ ಇಂತಹ ಪುನರ್ಜನ್ಮದ ಕಥೆಗಳಲ್ಲಿ ತುಂಬ ನಂಬಿಕೆಯಿಟ್ಟವನು. ಹಾಗಾಗಿ ಆತ ಈ ಘಟನೆಯ ಹಿಂದಿನ ಸತ್ಯವನ್ನು ಬೇಧಿಸಲು ಹೊರಡುತ್ತಾನೆ. ಸಂಜನಾ ಹಾಗೂ ಮಲ್ಲಿಕಾ ಎಂಬ ಇಬ್ಬರು ಒಂದೇ ತೆರನಾದ ವ್ಯಕ್ತಿಗಳಲ್ಲಿ ಯಾರು ನಿಜ, ಯಾರು ಸತ್ತವರು ಎಂದು ರಹಸ್ಯದ ಬೆನ್ನೇರಿ ಹೋಗುತ್ತಾನೆ. ರಹಸ್ಯವೇನು ಎಂಬುದನ್ನು ನೋಡಲು ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು.

ಚಿತ್ರದ ನಾಯಕಿ ಶೀನಾ ನಾಯರ್ ಹೊಸ ಪರಿಚಯ. ಆಕೆಗಿದು ಮೊದಲ ಚಿತ್ರ. ಸಮೀರ್ ದತ್ತಾನಿ (ಧ್ಯಾನ್) ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಹಿಂದಿಯಲ್ಲೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಈ ಚಿತ್ರ ಅವರ ಮೊದಲ ಹಾರರ್ ಚಿತ್ರ. ಹಿಂದಿಯಲ್ಲಿ ಎಷ್ಟೋ ಪುನಪರ್ಜನ್ಮದ ಕಥೆಗಳು ಬಂದು ಹೋಗಿವೆ. ಈಗ ಮತ್ತೆ 8 ಎಂಬ ಈ ಚಿತ್ರದಲ್ಲಿ ಅದೇ ಪುನರ್ಜನ್ಮದ ಎಳೆಯಿದೆ. ಆದರೆ ಅದರ ಜತೆಜತೆಗೇ ಒಂದು ಸುಂದರ ಪ್ರೇಮ ಕಥಾನಕವೂ ಇದೆ. ಪಿಪಿಸಿ ಹಾರರ್‌ಟೈನ್‌ಮೆಂಟ್ ಹಾಗೂ ಗ್ಲೋರಿಯಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಈ ಚಿತ್ರದ ನಿರ್ದೇಶಕರು ವಿಲ್ಸನ್ ಲೂಯೀಸ್. ಚಿತ್ರದ ಬಿಡುಗಡೆಯ ದಿನಾಂಕವಿನ್ನೂ ಪ್ರಕಟಗೊಂಡಿಲ್ಲ.

ವೆಬ್ದುನಿಯಾವನ್ನು ಓದಿ