ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಹಾಸ್ಯಾಸ್ಪದ ಎಂದು ಟೀಕಿಸಿದ ಮಾಯಾವತಿ

ಬುಧವಾರ, 30 ಜನವರಿ 2019 (11:02 IST)
ಲಖನೌ : ಬಡತನ  ನಿರ್ಮೂಲನೆ ಮಾಡಲು ಪ್ರತಿಯೊಬ್ಬರಿಗೆ ಕನಿಷ್ಠ ವೇತನ ನೀಡಲಾಗುವುದು ಎಂಬ ರಾಹುಲ್‌ ಗಾಂಧಿ ಹೇಳಿಕೆ ಹಾಸ್ಯಾಸ್ಪದ ಎಂದು ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಟೀಕಿಸಿದ್ದಾರೆ.


ರಾಹುಲ್‌ ಗಾಂಧಿ ಸೋಮವಾರ ಭಾಷಣವೊಂದರಲ್ಲಿ, ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ ಮಾಡಲು ಪ್ರತಿಯೊಬ್ಬರಿಗೆ ಕನಿಷ್ಠ ವೇತನ ನೀಡಲಾಗುವುದು ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಮಾತನಾಡಿದ ಮಾಯಾವತಿ ಅವರು,’ ಇದೊಂದು ಹೇಳಿಕೆ ಅಷ್ಟೇ. ಈ ಹಿಂದೆ ನೀಡಿದ ಗರೀಬಿ ಹಠಾವೋ, ಅಚ್ಚೇ ದಿನ್‌ ಎಂಬಂತೆ ಇದು ಕೂಡ ಒಂದು ಹಾಸ್ಯಾಸ್ಪದ’ ಎಂದು ಟೀಕಿಸಿದ್ದಾರೆ.


ಬಿಜೆಪಿ ಕೂಡ ಇಂಥ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು. ನಿಮಗೆಲ್ಲರಿಗೂ ಅಚ್ಚೇ ದಿನ್‌ ಬರುತ್ತದೆ ಎಂದು ಹೇಳಿಕೊಂಡು ಬಂದೇ ಐದು ವರ್ಷ ದೂಡಿತು ಎಂದು ಟೀಕಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ