ಪಂಜಾಬಿ ಹಾಡು ಹಾಡಿದ್ದಕ್ಕೆ ಪಾಕಿಸ್ತಾನಿ ಯುವತಿಗೆ ಸಿಕ್ಕಿದೆ ಇಂತಹ ಶಿಕ್ಷೆ
ಮಂಗಳವಾರ, 11 ಸೆಪ್ಟಂಬರ್ 2018 (08:50 IST)
ಪಾಕಿಸ್ತಾನ : ಪಾಕಿಸ್ತಾನದ ವಿಮಾನ ನಿಲ್ದಾಣವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಪಂಜಾಬಿ ಹಾಡು ಹಾಡಿದ್ದಕ್ಕೆ ವಿಧಿಸಿದ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಾ.
ಪಾಕಿಸ್ತಾನದ ವಿಮಾನ ನಿಲ್ದಾಣವೊಂದರಲ್ಲಿ 25 ವರ್ಷದ ಪಾಕಿಸ್ತಾನದ ಯುವತಿಯೊಬ್ಬಳು ಪಂಜಾಬಿ ಹಾಡನ್ನು ಹಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆ ಹಾಡುವಾಗ ಪಾಕ್ ಆಡಳಿತಕ್ಕೆ ಸಂಬಂಧಿಸಿದ್ದ ಕ್ಯಾಪ್ ಧರಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ದೇಶ ದ್ರೋಹದ ಕೆಲಸವೆಂದು ಪರಿಗಣಿಸಿದ ಅಧಿಕಾರಿಗಳು ಆಕೆಗೆ ದಂಡ ಕಟ್ಟುವ ಶಿಕ್ಷೆನೀಡಿದ್ದಾರೆ. ಅಲ್ಲದೇ ಮುಂದಿನ ಎರಡು ವರ್ಷಗಳ ಕಾಲ ಆಕೆಗೆ ವೇತನ ಹೆಚ್ಚಳವೂ ಇಲ್ಲ ಎಂದು ಹೇಳಲಾಗಿದೆ.
ಮುಂದೆ ಆಕೆ ಇಂಥಹ ದೇಶ ದ್ರೋಹದ ಕೆಲಸದಲ್ಲಿ ಭಾಗಿಯಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಳಿದ ಸಿಬ್ಬಂದಿಗೂ ಇನ್ನು ಮುಂದೆ ಇಂಥ ಕೆಲಸ ಮಾಡಬಾರದು ಎಂಬ ಸೂಚನೆಯನ್ನು ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.