ಭೂಹಗರಣ:ಅಶೋಕ್ ಮಲ್ಹೋತ್ರ ಸೆರೆ

ಸೋಮವಾರ, 6 ಆಗಸ್ಟ್ 2007 (13:04 IST)
ರಾಜಧಾನಿ ದೆಹಲಿಯಲ್ಲಿ ಬಹುಕೋಟಿ ಮೌಲ್ಯದ ವಿವಿಧ ಭೂಹಗರಣ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಬೇಕಾಗಿದ್ದ ಆರೋಪಿ ಭೂಗತ ಆಶೋಕ್ ಮಲ್ಹೋತ್ರನನ್ನು ಟಿವಿ ಸಂದರ್ಶನದ ಸಂದರ್ಭದಲ್ಲಿ ಸಿಬಿಐ ಬಂಧಿಸಿದ.

ದೆಹಲಿಯಲ್ಲಿ ಬಹುಕೋಟಿ ಮೌಲ್ಯದ ಭೂಹಗರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೆಂದು ಹೇಳಲಾಗಿರುವ ಆಶೋಕ್ ಮಲ್ಹೋತ‌್ರ ಇದುವರೆಗೆ ಸೆರೆ ಸಿಕ್ಕದೆ ಭೂಗತನಾಗಿದ್ದ, ಆದರೆ ಇಂದು ಝಿ-ಟಿವಿಯಲ್ಲಿ ಸಂದರ್ಶನ ನಡೆಸಿ ಹೊರಬಂದಾಗ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರಸ್ತುತ ಭೂಹಗರಣವನ್ನು ಇದೀಗ ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಸಿಬಿಐ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ಕಳುಹಿಸಿದರೂ ಆತ ತನಿಖಾತಂಡದ ಮುಂದೆ ಹಾಜರಾಗಿರಲಿಲ್ಲ.

ತಾನು ಭೂಗತನಾಗಲು ಭೂಹಗರಣ ಕಾರಣವಲ್ಲ, ತನ್ನನ್ನು ಹಗರಣದಲ್ಲಿ ದುರುದ್ದೇಶಪೂರ್ವಕ ಸೇರಿಸಲಾಗಿದೆ. ಇದೊಂದು ಸಂಚು ಎಂದಿರುವ ಅಶೋಕ್ ಮಲ್ಹೋತ್ರ ತನಗೆ ಜೀವ ಬೇದರಿಕೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾನೆ.

ತಾನು ಸಿಬಿಐ ಮುಂದೆ ಶರಣಾಗುವುದಾಗಿ ತಿಳಿಸಿದ್ದ ಅಶೋಕ್ ಮೆಲ್ಹೋತ್ರ, ತನ್ನ ವಿಚಾರಣೆ ವಕೀಲರೊಬ್ಬರ ಸಮ್ಮುಖದಲ್ಲೇ ಆಗಬೇಕು ಎಂದು ವಿನಂತಿಸಿದ್ದನೆನ್ನಲಾಗಿದೆ.

ವೆಬ್ದುನಿಯಾವನ್ನು ಓದಿ