ಮನೆಯೊಳಗೆ ಮಲಗಿದ್ದ ಯುವತಿಗೆಯ ಮೇಲೆ ನಡೆಯಿತು ಇಂತಹ ಕೃತ್ಯ!

ಸೋಮವಾರ, 14 ಡಿಸೆಂಬರ್ 2020 (10:26 IST)
ಗಾಜಿಯಾಬಾದ್ : ಮನೆಯೊಳಗೆ ಮಲಗಿದ್ದ 23 ವರ್ಷದ ಯುವತಿಯ ಮೇಲೆ ಆಸಿಡ್ ನಿಂದ ಹಲ್ಲೆ ಮಾಡಿದ ಘಟನೆ ಮುರಾದ್ ನಗರದಲ್ಲಿ ನಡೆದಿದೆ.

ಮಹಿಳೆ ಜೋರಾಗಿ ಕಿರುಚಾಡುತ್ತಿದ್ದ ಕಾರಣ ಮನೆಯವರಿಗೆ ಎಚ್ಚರವಾಗಿದೆ. ಆದರೆ ಆರೋಪಿ ಮನೆಯವರಿಂದ ತಪ್ಪಿಸಿಕೊಂಡಿದ್ದಾನೆ. ಅಸಿಡ್ ದಾಳಿಯಿಂದ ಒದ್ದಾಡುತ್ತಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮಹಿಳೆಗೆ ಸುಟ್ಟ ಗಾಯಗಳಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ