ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ರೈಲ್ವೆ ಆಹಾರ...

ಶುಕ್ರವಾರ, 21 ಜುಲೈ 2017 (13:19 IST)
ನವದೆಹಲಿ:ರೈಲ್ವೆ ಪ್ರಯಾಣಿಕರಿಗೆ ನೀಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಎಂದು ಮಹಾಲೆಖಪಾಲ(ಸಿಎಜಿ) ಸಂಸತ್ ನಲ್ಲಿ ತನ್ನ ವರದಿ ಮಂಡಿಸಿದೆ. ಕಲುಷಿತ ಆಹಾರ, ಮರುಬಳಕೆ ಆಹಾರದ ಜತೆಗೆ ಅವಧಿ ಮುಗಿದ ಪ್ಯಾಕಿಂಗ್ ಆಹಾರ ಮತ್ತು ಅನಧಿಕೃತ ಬ್ರ್ಯಾಂಡ್ ನ ನೀರಿನ ಬಾಟಲ್ ಗಳನ್ನು ರೈಲಿನಲ್ಲಿ ಪ್ರಯಾಣಿಕರಿಗೆ ನೀದಲಾಗುತ್ತಿದೆ. ಇವಿಗಳು ಮನುಷ್ಯನ ಸೇವನೆಗೆ ಯೋಗ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
 
ಸಿಎಜಿ ತಂಡ ಹಾಗೂ ರೈಲ್ವೆ ಇಲಾಖೆ ಜಂಟಿ ತಪಾಸಣೆ ನಡೆಸಿ ಈ ವರದಿಯನ್ನು ನೀಡಲಾಗಿದೆ. ಆಯ್ದ 74 ರೈಲ್ವೆ ನಿಲ್ದಾಣಗಳು ಹಾಗೂ 80 ರೈಲುಗಳಲ್ಲಿ ಆಹಾರವನ್ನು ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ರೈಲ್ವೆ ಆಹಾರ ನೀತಿಯಲ್ಲಿ ಪದೇ ಪದೇ ಬದಲಾವಣೆಯಿಂದಲೇ ಸಾಕಷ್ಟು ಸಮಸ್ಯೆಯಾಗುತ್ತದೆ. ರೈಲ್ವೆ ಆಹಾರ ನೀತಿ ಪ್ರಯಾಣಿಕರಿಗೆ ಸದಾ ಪ್ರಶ್ನೆಯಾಗಿಯೇ ಇರುತ್ತದೆ. ರೈಲ್ವೆಯಲ್ಲಿ ನೈರ್ಮಲ್ಯಕ್ಕೆ ಗಮನ ನೀಡುತ್ತಿಲ್ಲ. ಪ್ರಯಾಣಿಕರು ಖರೀದಿಸುವ ಆಹಾರಕ್ಕೆ ಬಿಲ್ ಕೂಡ ನೀದುತ್ತಿಲ್ಲ. ಆಹಾರದ ಗುಣಮಟ್ಟವಂತೂ ತೀರಾ ಕಳಪೆಯದ್ದಾಗಿದೆ.
 
ರೈಲ್ವೆ ನೀತಿಗಳನ್ನು ಆಗಾಗ ಬದಲಾವಣೆ ಮಾಡುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಸೂಕ್ತ ಅಡುಗೆ ಕೋಣೆ, ಕೇಟರಿಂಗ್ ಯೂನಿಟ್, ಆಟೋಮ್ಯಾಟಿಕ್ ವೆಂಡಿಂಗ್ ಮಿಷನ್ ಗಳನ್ನು ಕಲ್ಪಿಸದಿರುವುದು ಭಾರತೀಯ ರೈಲ್ವೆ ವೈಫಲ್ಯವಾಗಿದೆ ಎಂದು ಜಿಎಜಿ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ