‘ಪಾಕಿಸ್ತಾನ ಬುದ್ಧಿ ಕಲಿಯದಿದ್ದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಖಚಿತ’
ಕಳೆದ ವರ್ಷ ಸೆಪ್ಟೆಂಬರ್ 28 ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯೊಳಗೆ ನುಗ್ಗಿ ಹಲವು ಉಗ್ರರನ್ನು ಸದೆಬಡಿದು ಬಂದಿತ್ತು. ಇದು ಉರಿ ದಾಳಿಯ ನಂತರ ಸಿಟ್ಟಿಗೆದ್ದ ಭಾರತದ ಕ್ರಮವಾಗಿತ್ತು. ಇದಕ್ಕೆ ವಿಶ್ವವೇ ಬೆಚ್ಚಿಬಿದ್ದಿತ್ತು. ಇದೀಗ ಪದೇ ಪದೇ ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಗೆ ತಕ್ಕ ಎದಿರೇಟು ಕೊಡಲು ಅದೇ ಅಸ್ತ್ರ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಸೇನಾ ಮುಖ್ಯಸ್ಥರು ಎಚ್ಚರಿಸಿದ್ದಾರೆ.