‘ಸಾಲಮನ್ನಾ ಮಾಡುವುದು ರಾಜ್ಯಗಳಿಗೆ ಫ್ಯಾಶನ್ ಆಗಿಬಿಟ್ಟಿದೆ’
ಕರ್ನಾಟಕ ಸರ್ಕಾರ ಕೂಡಾ ರೈತರ ಸಾಲಮನ್ನಾ ಮಾಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಹಿಂದಿನಿಂದಲೂ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ ಎನ್ನುತ್ತಲೇ ಬಂದಿದೆ. ವಿಪರ್ಯಾಸವೆಂದರೆ ರಾಜ್ಯದಲ್ಲಿ ಸ್ವತಃ ಬಿಜೆಪಿ ಪಕ್ಷವೇ ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರದ ಮುಂದೆ ಪಟ್ಟು ಹಿಡಿದಿತ್ತು.