‘ಸೋನಿಯಾರಂತೆ ರಾಹುಲ್ ಗಾಂಧಿ ಕೂಡಾ ಕಚೇರಿಯಲ್ಲಿರಬೇಕು’

ಶುಕ್ರವಾರ, 28 ಏಪ್ರಿಲ್ 2017 (09:29 IST)
ನವದೆಹಲಿ: ಕಾಂಗ್ರೆಸ್ ಸತತ ಸೋಲಿನಿಂದ ಕಂಗೆಟ್ಟಿದೆ. ಈ ಸಂದರ್ಭದಲ್ಲಿ ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಾಯತ್ವದ ನಡುವೆ ಹೋಲಿಕೆ ಮಾಡಿದ್ದಾರೆ.

 
ಸೋನಿಯಾ ಗಾಂಧಿ 19 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದಾಗ ಪಕ್ಷದ ಕಚೇರಿಯಲ್ಲಿ ಕನಿಷ್ಠ 2-3 ಗಂಟೆ ಪ್ರತಿ ದಿನ ಹಾಜರಿರುತ್ತಿದ್ದರು. ಇದರಿಂದ ಅವರು ಪಕ್ಷದ ಕಾರ್ಯಕರ್ತರಿಗೆ ಹತ್ತಿರವಾಗಿದ್ದರು. ಆದರೆ ರಾಹುಲ್ ಹಾಗಲ್ಲ. ಅವರೂ ಅಮ್ಮನಂತೆ ಕಚೇರಿಯಲ್ಲಿ ಸ್ವಲ್ಪ ಹೊತ್ತು ಕಳೆದರೆ, ಕಾಂಗ್ರೆಸ್ ಕಚೇರಿಗೆ ಮತ್ತೆ ಕಳೆ ಬರಬಹುದು.

ಕಾರ್ಯಕರ್ತರಲ್ಲಿ ಉತ್ಸಾಹ ಬರಬಹುದು. ರಾಹುಲ್ ಅಮ್ಮನ ಸಲಹೆ ಪಡೆಯಬೇಕು ಎಂದು ಶೀಲಾ ದೀಕ್ಷಿತ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಹಾಗಂತ ರಾಹುಲ್ ಶೈಲಿ ತಪ್ಪು ಎಂದು ಅವರ ಹೇಳುವುದಿಲ್ಲ.

ಎಲ್ಲರಿಗೂ ಅವರದ್ದೇ ಶೈಲಿಯಿದೆ. ರಾಹುಲ್ ತಮ್ಮದೇ ಶೈಲಿಯಲ್ಲಿ ನಡೆಯುತ್ತಿದ್ದಾರೆ. ಅದಕ್ಕೆ ನಾವು ಹೊಂದಿಕೊಂಡಿದ್ದೇವೆ. ರಾಹುಲ್ ವಿಫಲ ನಾಯಕ ಎಂದು ಒಪ್ಪಿಕೊಳ್ಳಲು ತಾನು ತಯಾರಿಲ್ಲ. ಅದಕ್ಕೆ ಇನ್ನೂ ಸಮಯವಿದೆ. ನಾವು ಎದ್ದು ಬರಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ