100 ರಣಹದ್ದುಗಳು ದಾರುಣ ಸಾವು!

ಶುಕ್ರವಾರ, 18 ಮಾರ್ಚ್ 2022 (13:51 IST)
ಅಸ್ಸಾಂ : ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಛಾಯ್ಗಾಂವ್ ಪ್ರದೇಶದ ಬಳಿ ಅಳಿವಿನ ಅಂಚಿನಲ್ಲಿರುವ ಸುಮಾರು 100 ರಣಹದ್ದುಗಳು ಮೃತಪಟ್ಟಿದ್ದು, ಇನ್ನೂ ಹಲವು ರಣಹದ್ದುಗಳು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿವೆ.

ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಅಸ್ಸಾಂನ ಛಯ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲನ್ಪುರ ಪ್ರದೇಶದಲ್ಲಿ ರಣಹದ್ದುಗಳ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು ರಣಹದ್ದುಗಳು ಮೇಕೆ ಮೃತದೇಹವನ್ನು ತಿಂದಿದ್ದು, ವಿಷಪೂರಿತ ಆಗಿದ್ದರಿಂದ ರಣಹದ್ದುಗಳು ಮೃತಪಟ್ಟಿವೆ ಎಂದು ಶಂಕಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಕಾಮ್ರೂಪ್ ಪಶ್ಚಿಮ ಅರಣ್ಯ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್ಒ) ಡಿಂಪಿ ಬೋರಾ, ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ 100 ರಣಹದ್ದುಗಳು ಮೃತಪಟ್ಟಿದುವುದು ಬೆಳಕಿಗೆ ಬಂದಿದೆ. ರಣಹದ್ದುಗಳ ಶವದ ಬಳಿ ಮೇಕೆ ಮೂಳೆಗಳು ಪತ್ತೆಯಾಗಿವೆ. ವಿಷಪೂರಿತ ಮೇಕೆಯ ಮೃತದೇಹವನ್ನು ತಿಂದು ರಣಹದ್ದುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ