ಶನಿವಾರ ರಾತ್ರಿ 8.40ಕ್ಕೆ ತಿರುವನಂತಪುರಂ ರೈಲು ನಿಲ್ದಾಣದಿಂದ ಹೊರಟಿದ್ದ ಈ ರೈಲಿನ 12 ಬೋಗಿಗಳು ಹಳಿ ತಪ್ಪಿವೆ. ಎರ್ನಾಕುಲಂ ಜಿಲ್ಲೆಯ ಕುರಕಟ್ಟಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಘಟನೆಯ ನಂತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ತ್ರಿಶೂರು ಹಾಗೂ ಕೊಚ್ಚಿಗೆ ಸ್ಥಳೀಯ ರೈಲು ಹಾಗೂ ಬಸ್‌ಗಳ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಿಂದ ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಕೇರಳದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸ್ಥಳೀಯ ರೈಲು ಸಂಚಾರ ಅಸ್ತವ್ಯಸ್ಥವಾಗಿದೆ. ಮಂಜಾನೆ 6 ರಿಂದ 11 ಗಂಟೆಯವರೆಗೂ ಹಳಿ ದುರಸ್ಥಿ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.